ಇಂಟರ್ನೆಟ್ ಡೇಟಾ ಬಳಸದೆ ಕೇವಲ ಕರೆ ಹಾಗೂ ಎಸ್‌ಎಂಎಸ್‌ಗಾಗಿ ಮೊಬೈಲ್ ಬಳಸುವ ಲಕ್ಷಾಂತರ ಗ್ರಾಹಕರಿಗೆ ಏರ್‌ಟೆಲ್ ಸಿಹಿ ಸುದ್ದಿ ನೀಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಹೊಸ ನಿಯಮಗಳಿಗೆ ಅನುಗುಣವಾಗಿ, ಯಾವುದೇ ಮೊಬೈಲ್ ಡೇಟಾ ಸೇರ್ಪಡೆಯಿಲ್ಲದ ಮೂರು ಹೊಸ ಕೈಗೆಟುಕುವ ಬೆಲೆಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳನ್ನು ಕಂಪನಿ ಪರಿಚಯಿಸಿದೆ.
ಹೊಸ ಪ್ಲಾನ್‌ಗಳ ವಿವರ ಮತ್ತು ಮಾನ್ಯತೆ:
- ರೂ. 185 ಪ್ಲಾನ್: 28 ದಿನಗಳ ಮಾನ್ಯತೆ (Validity) ಹೊಂದಿದೆ.
- ರೂ. 203 ಪ್ಲಾನ್: 30 ದಿನಗಳ ಮಾನ್ಯತೆ ನೀಡುತ್ತದೆ.
- ರೂ. 206 ಪ್ಲಾನ್: ಪೂರ್ಣ ಕ್ಯಾಲೆಂಡರ್ ತಿಂಗಳ ಮಾನ್ಯತೆ ನೀಡಲಿದ್ದು, ಪ್ರತಿ ತಿಂಗಳು ಒಂದೇ ದಿನಾಂಕಕ್ಕೆ ರೀಚಾರ್ಜ್ ಮಾಡಿಕೊಳ್ಳಲು ಅನುಕೂಲಕರವಾಗಿದೆ.
ಸಿಗಲಿರುವ ಪ್ರಮುಖ ಸೌಲಭ್ಯಗಳು:ಈ ಮೂರೂ ಪ್ಲಾನ್‌ಗಳಲ್ಲಿ ಗ್ರಾಹಕರು ಅನಿಯಮಿತ ಸ್ಥಳೀಯ (Local), ಎಸ್‌ಟಿಡಿ (STD) ಮತ್ತು ರೋಮಿಂಗ್ ಕರೆಗಳನ್ನು ಮಾಡಬಹುದು. ಇದರೊಂದಿಗೆ 300 ಉಚಿತ SMS ಸೌಲಭ್ಯ ಹಾಗೂ ಉಚಿತ ‘ಹಲೋಟ್ಯೂನ್ಸ್’ ಸೌಲಭ್ಯವೂ ದೊರೆಯಲಿದೆ. ಈ ಪ್ಲಾನ್‌ಗಳು ಪ್ರಸ್ತುತ ಏರ್‌ಟೆಲ್ ಆ್ಯಪ್ ಹಾಗೂ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, TRAI ನೀಡಿದ್ದ ಅಕ್ಟೋಬರ್ 21ರ ಗಡುವಿಗೂ ಮುನ್ನವೇ ನಿಯಮ ಜಾರಿಗೊಳಿಸಿದ ಮೊದಲ ಟೆಲಿಕಾಂ ಸಂಸ್ಥೆ ಏರ್‌ಟೆಲ್ ಆಗಿದೆ.










































