ರಾಷ್ಟ್ರೀಯ ತಂಡದ ಕ್ಯಾಂಪ್ ತೊರೆದಿದ್ದ ಕ್ರಿಸ್ಟಿಯಾನೋ ರೊನಾಲೊಗೆ 30 ದಿನಗಳ ನಿಷೇಧ, ದಂಡ!

Picture of Savistara

Savistara

Bureau Report

ಲಿಸ್ಟನ್: ಪೋರ್ಚುಗಲ್ ರಾಷ್ಟ್ರೀಯ ಫುಟ್‌ಬಾಲ್ ತಂಡದಕೋಚ್ ಜಾರ್ಜ್ ಜೀಸಸ್ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ತರಬೇತಿ ಶಿಬಿರವನ್ನು ತೊರೆದು ಹೊರನಡೆದಿದ್ದ ತಾರಾ ಆಟಗಾರ ಕ್ರಿಸ್ಟಿಯಾನೋ ರೊನಾಲೊಗೆ ಪೋರ್ಚುಗೀಸ್ ಫುಟ್‌ಬಾಲ್ ಫೆಡರೇಷನ್ (FPF) 30 ದಿನಗಳ ಅಮಾನತು ಶಿಕ್ಷೆ ಮತ್ತು 255 ಯುರೋ (27,181.72 ಭಾರತೀಯ ರೂಪಾಯಿ) ದಂಡ ವಿಧಿಸಿದೆ.

ಫೆಡರೇಷನ್‌ನ ಶಿಸ್ತು ಸಮಿತಿಯು ರೊನಾಲ್ಲೊ ಮೇಲಿನ ಆರೋಪಗಳನ್ನು ಎತ್ತಿಹಿಡಿದು ಈ ನಿರ್ಧಾರ ಕೈಗೊಂಡಿದೆ.ಡೆನ್ಮಾರ್ಕ್ ವಿರುದ್ಧದ ನೇಷನ್ಸ್ ಲೀಗ್ ಪಂದ್ಯಕ್ಕೂ ಮುನ್ನ ಕೊಪನ್‌ಹೇಗನ್‌ನಲ್ಲಿದ್ದ ಪೋರ್ಚುಗಲ್ ತಂಡದ ಕ್ಯಾಂಪ್‌ನಿಂದ ರೊನಾಲ್ಲೊ ಹೊರನಡೆದಿದ್ದರು. ನಾರ್ವೆ ವಿರುದ್ಧದ ಪಂದ್ಯದಲ್ಲಿ ತಮ್ಮನ್ನು ಕಾಯ್ದಿರಿಸಿದ ಆಟಗಾರನನ್ನಾಗಿ (unused substitute) ಬೆಂಚ್‌ಗೆ ಸೀಮಿತಗೊಳಿಸಿದ್ದಕ್ಕೆ ಬೇಸರಗೊಂಡಿದ್ದ ರೊನಾಲ್ಲೊ, ಕೋಚ್ ಜೀಸಸ್ ತಮ್ಮ ತಂಡದ ಪಾತ್ರದ ಬಗ್ಗೆ ನೀಡಿದ್ದ ಮಾತನ್ನು ತಪ್ಪಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಕೋಚ್ ಜೀಸಸ್ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ಘಟನೆಯ ನಂತರ ರೊನಾಲ್ಲೊ ತಮ್ಮ ನಡೆಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದು, ನಾರ್ವೆ ಪಂದ್ಯದ ನಂತರ ಅಭಿಮಾನಿಗಳನ್ನು ಗೌರವಿಸದೇ ಮತ್ತು ಸಹ ಆಟಗಾರರನ್ನು ತೊರೆದು ಬಂದದ್ದು ತಮ್ಮ ತಪ್ಪೆಂದು ಒಪ್ಪಿಕೊಂಡಿದ್ದಾರೆ. ಶಿಕ್ಷೆಯ ಅವಧಿ ಮುಗಿದ ನಂತರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ತಾವು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.

ಪೋರ್ಚುಗೀಸ್ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಪೆಟ್ರೊ ಪ್ರೊಯೆಂಕಾ(Pedro Proenca) ಸಹ ಈ ವಿಚಾರ ಇತ್ಯರ್ಥವಾದ ನಂತರ ರೊನಾಲ್ಲೊ ಮತ್ತೆ ತಂಡಕ್ಕೆ ಮರಳುವುದನ್ನು ಒಕ್ಕೂಟ ಬಯಸುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ನಿಷೇಧದ ಸ್ಪಷ್ಟ ಪರಿಣಾಮಗಳು ಮತ್ತು ಮುಂದಿನ ಪಂದ್ಯಗಳಲ್ಲಿ ಅವರ ಲಭ್ಯತೆಯ ಬಗ್ಗೆ ಪೂರ್ಣ ವಿವರ ಹೊರಬೀಳಬೇಕಿದೆ.

News Updates

ಪುತ್ತೂರುದ ಪಿಲಿಗೊಬ್ಬು-2026ಕ್ಕೆ ಚಾಲನೆ: ತುಳುನಾಡಿನ ಸಂಸ್ಕೃತಿ, ಭಕ್ತಿಯ ಸಂಗಮವೇ ಹುಲಿವೇಷ -ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ-ಬಡ ಕುಟುಂಬಗಳಿಗೆ ನಾಲ್ಕು ಮನೆ ನಿರ್ಮಾಣ, ಹುಲಿವೇಷ ಕಲೆಯ ಉಳಿವಿಗೆ ಪಿಲಿಗೊಬ್ಬು ಆಯೋಜನೆ

[t4b-ticker]
error: Content is protected !!