ಬೆಂಗಳೂರು: ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸದೇ ಇದ್ದ ನರೇಂದ್ರ ಮೋದಿ ಅವರನ್ನು ಗುಜರಾತ್‌ನಲ್ಲಿ ಮುಖ್ಯಮಂತ್ರಿ ಮಾಡಿದವರು ಯಾರು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪೇಮೆಂಟ್ ಕೊಟ್ಟು ಅಧ್ಯಕ್ಷರಾಗುವುದು ರೂಢಿಯೂ ಇಲ್ಲ, ಕೊಲೆ ಕೇಸ್‌ನಲ್ಲಿ ಗಡೀಪಾರಾದವರು, ಪೋಕೋ ಆರೋಪಿಗಳು, ಕ್ರಿಮಿನಲ್‌ಗಳು ಹಾಗೂ ಜೈಲುವಾಸಿಗಳನ್ನು ಅಧ್ಯಕ್ಷರನ್ನಾಗಿ ಮಾಡುವ ಕೆಟ್ಟ ಪರಂಪರೆಯೂ ಇಲ್ಲ ಎಂದಿದ್ದಾರೆ.ಮುಂದುವರಿದು, ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸದ ಮೋದಿ ಅವರನ್ನು ಗುಜರಾತ್‌ನಲ್ಲಿ ಮುಖ್ಯಮಂತ್ರಿ ಮಾಡಿದವರು ಯಾರು?. ಯಾವ ಜನರಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು ಎನ್ನುವ ಇತಿಹಾಸವಾದರೂ ಬಿಜೆಪಿಗೆ ನೆನಪಿದೆಯೇ ಎಂದು ಕೇಳಿದ್ದಾರೆ.
ಸ್ವಂತ ಬಲದಲ್ಲಿ ಎಂದೂ ಅಧಿಕಾರಕ್ಕೆ బందిల్ల
ಯಾವ ಚುನಾವಣೆಯನ್ನೂ ನಡೆಸದೇ, ಕನಿಷ್ಟ ಪಕ್ಷ ಆರ್‌ಎಸ್‌ಎಸ್ ಸಂಘಪರಿವಾರದಲ್ಲೇ ಚುನಾವಣೆ ಎದುರಿಸದ ಮೋಹನ್ ಭಾಗವತ್‌ಗೆ ಯಾವ ಜನರು ಆಯ್ಕೆ ಮಾಡಿದ್ದಾರೆ?. ‘ಜೀ’ ಗಳನ್ನು ಚುನಾವಣಾ ಚಾಣಕ್ಯ ಎಂದು ‘ಹುಜೂರ್’ ಎನ್ನುವ ಬಿಜೆಪಿ ಕರ್ನಾಟಕದಲ್ಲಿ ಎಂದೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಬರುವುದೂ ಇಲ್ಲ ಎಂದಿದ್ದಾರೆ.
ಬಿಜೆಪಿಯ ಪಾಕಿಸ್ತಾನದ ಮೇಲಿನ ಪ್ರೀತಿಯಂತೂ ನಿನ್ನೆ ಮೊನ್ನೆಯದಲ್ಲ. ಅದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಿಸಿದ ಸಾವರ್ಕರ್ ಇಂದ ಹಿಡಿದು ಇಂದಿನ ರಸಬಾಳೆ, ಹೊಸಬಾಳೆಯ ‘ಪಾಕಿಸ್ತಾನದೊಂದಿಗೆ ಮಾತುಕತೆಯ ಬಾಗಿಲು ಮುಚ್ಚಬಾರದು’ ಎನ್ನುವವರೆಗೂ ಮುಂದುವರೆಯುತ್ತಲೇ ಇದೆ
- ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ
ಹೌದು ಆರ್ ಎಸ್ ಎಸ್ ಮತ್ತು ಬಿಜೆಪಿ ಪ್ರತಿಪಾದಿಸುವ ನಕಲಿ ಹಿಂದೂತ್ವವನ್ನು ವಿರೋಧಿಸುತ್ತಲೇ ಇದ್ದೇನೆ, ವಿರೋಧಿಸುತ್ತಲೇ ಇರುತ್ತೇನೆ. ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.










































