ಜನಪ್ರಿಯ ಪ್ರವಾಸಿತಾಣ ‘ಅಲಿಬಾಗ್’ಬಳಿ ಜಮೀನು ಖರೀದಿಸಿದ ನಟ ಯಶ್ ದಂಪತಿ

Picture of Savistara

Savistara

Bureau Report

ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿತಾಣ ಅಲಿಬಾಗ್. ಇಲ್ಲಿರುವ ‘ಕಿಹಿಮ್ ಬೀಚ್’ ಬಳಿ ರಾಕಿಂಗ್ ಸ್ಟಾರ್ ಯಶ್ ದಂಪತಿ ಜಮೀನು ಖರೀದಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ‘ಮನಿ ಕಂಟ್ರೋಲ್’ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ರಾಯಗಡ ಜಿಲ್ಲೆಯ ಕಾಮತ್ ಗ್ರಾಮದಲ್ಲಿರುವ ‘ಕಿಹಿಮ್ ಬೀಚ್’ ಪಕ್ಕದ ಕೃಷಿ ಭೂಮಿಯನ್ನು ಯಶ್ ಅವರು ಬರೋಬ್ಬರಿ ₹24 ಕೋಟಿ ನೀಡಿ ಖರೀದಿಸಿದ್ದಾರೆ. ಈ ಭೂಮಿಗೆ ₹1.44 ಕೋಟಿ ಸ್ಟಾಂಪ್‌ ಡ್ಯೂಟಿ ಹಾಗೂ ₹60 ಸಾವಿರ ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಈ ಕೃಷಿ ಭೂಮಿ ಸುಮಾರು 5,289 ಚದರ ಮೀಟರ್ (1.306 ಎಕರೆ ) ವಿಸ್ತೀರ್ಣವನ್ನು ಹೊಂದಿದೆ. ಈ ಆಸ್ತಿಯಲ್ಲಿ ಒಂದು ಮನೆ ಕೂಡ ಸೇರಿದೆ. ಈಗಾಗಲೇ ಈ ಜಮೀನನ್ನು ಸೆಕ್ಷನ್ 7ರ ಅಡಿಯಲ್ಲಿ ‘ಕೃಷಿ ಭೂಮಿ’ ಎಂದು ನೋಂದಣಿ ಮಾಡಿಸಲಾಗಿದೆ ಎಂದು ವರದಿಯಾಗಿದೆ.ಬಾಲಿವುಡ್‌ನ ಅನೇಕ ಸಿನಿ ತಾರೆಯರು ಹಾಗೂ ಉದ್ಯಮಿಗಳು ಈ ಕಡಲ ತೀರಕ್ಕೆ ಹತ್ತಿರವಿರುವ ಅಲಿಬಾಗ್ ಸುತ್ತಮುತ್ತ ಆಸ್ತಿ ಹೊಂದಿದ್ದಾರೆ. ಅಲಿಬಾಗ್‌ನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಈಗ ಯಶ್ ಜೋಡಿ ಹೂಡಿಕೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!