ಬೆಂಗಳೂರು, ಮೇ 30: ವಿಧಾನಸಭೆಯಿಂದ ರಾಜ್ಯಸಭೆಯ 4 ಹಾಗೂ ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂ. 18ರಂದು ಚುನಾವಣೆಗ ನಿಗದಿಯಾಗಿದ್ದು ಅದಕ್ಕೆ ಸೋಮವಾರ (ಜೂ.1)ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದೆ.ಚುನಾವಣ ಆಯೋಗದವೇಳಾಪಟ್ಟಿಯಂತೆ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂ. 18ರಂದು ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಸಹ ಹೊರಬೀಳಲಿದೆ.
ಈಗಾಗಲೇ ರಾಜ್ಯಸಭೆಯ 4 ಸ್ಥಾನಗಳಿಗೂ ಅದೇ ದಿನ ಮತದಾನ ನಿಗದಿಯಾಗಿರುವುದರಿಂದ ಶಾಸಕರು ಮತದಾರರಾಗಿರುವ ರಾಜ್ಯಸಭೆಯ 4 ಹಾಗೂ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿದ್ದ 7 ಸದಸ್ಯರ ಅವಧಿ ಜೂ. 30ಕ್ಕೆ ಕೊನೆಗೊಳ್ಳಲಿದೆ. ಅದೇ ರೀತಿ ರಾಜ್ಯಸಭೆಯ 4 ಸದಸ್ಯರ ಅವಧಿ ಜೂ. 26ಕ್ಕೆ ಕೊನೆಗೊಳ್ಳಲಿದೆ. ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ. ನಿವೃತ್ತಿ ಹೊಂದಲಿರುವ ವಿಧಾನಪರಿಷತ್ತಿನ 7 ಸದಸ್ಯರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ತಲಾ ಮೂವರು, ಜೆಡಿಎಸ್‌ನ ಒಬ್ಬ ಸದಸ್ಯ ಇದ್ದಾರೆ. ಅದೇ ರೀತಿ ರಾಜ್ಯಸಭೆಯ 4 ಸ್ಥಾನಗಳ ಪೈಕಿ 2 ಬಿಜೆಪಿ, ಒಂದು ಕಾಂಗ್ರೆಸ್, 1 ಕಾಂಗ್ರೆಸ್ -ಜೆಡಿಎಸ್ ಹೊಂದಿದೆ.
ವೇಳಾಪಟ್ಟಿ
ಜೂ.1 ಅಧಿಸೂಚನೆ
ಪ್ರಕಟ:1 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ:ಜೂ.8
ನಾಮಪತ್ರಗಳ ಪರಿಶೀಲನೆ:,ಜೂ. 92
ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ: ಜೂ. 11
ಮತದಾನ:ಜೂ.18
ಮತದಾನ ಸಮಯ: ಬೆಳಗ್ಗೆ9ರಿಂದ ಸಂಜೆ4 ಗಂಟೆ
ಮತ ಎಣಿಕೆ:ಜೂ. 18ರ ಸಂಜೆ 5ಕ್ಕೆ









































