ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಮೊದಲ ಸಚಿವ ಸಂಪುಟ ಸಭೆ ನಡೆಯಿತು.
ಮೊದಲ ಸಚಿವ ಸಂಪುಟ ಸಭೆಯಲ್ಲೇ ರಾಜ್ಯದ ಜನರಿಗೆ ಬಂಪರ್ ಘೋಷಣೆ ಮಾಡಲಾಗಿದೆ. ನೂತನ ಸರ್ಕಾರದ ಪ್ರಮುಖ ಘೋಷಣೆಗಳು:
1.ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
2. ನಿರುದ್ಯೋಗಿಗಳಿಗಾಗಿ ಸರ್ಕಾರದ ವತಿಯಿಂದ ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಆ ಮೂಲಕ ತರಬೇತಿ ಜೊತೆಗೆ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಕೊಡಿಸುವ ವ್ಯವಸ್ಥೆ
3. ರಾಜ್ಯಾದ್ಯಂತ ಪಂಚಾಯತ್ ಮಟ್ಟದಲ್ಲಿ ಹತ್ತು ಸಾವಿರ ಭಾರತ್ ಜೋಡೋ ಯುವಕ ಸಂಘಗಳ ಪ್ರಾರಂಭಹಾಗೂ ಪ್ರತಿ ಸಂಘಕ್ಕೆ 10 ಲಕ್ಷ ಪ್ರೋತ್ಸಾಹ ಧನ
4. ಆಸ್ತಿ ಗಳ ಬಿ ಖಾತೆಯಿಂದ ಎ ಖಾತೆಗೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ರಾಜ್ಯಾದ್ಯಂತ ವಿಸ್ತರಣೆ
5. ಬೆಂಗಳೂರು ರಸ್ತೆಗಳ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ಅನುದಾನ ಘೋಷಣೆ
6. 2000 ಚದರ ಅಡಿ ಒಳಗಿನಕಟ್ಟಡಗಳಿಗೆ ಒಸಿ ಇಲ್ಲದಿದ್ದರೂ ನೀರು, ವಿದ್ಯುತ್ ಸೌಲಭ್ಯ










































