ಸಿಇಟಿ ಫಲಿತಾಂಶ ಪ್ರಕಟ: ಮೊದಲ 10ರಲ್ಲಿ ನಾಲ್ಕು ಬ್ಯಾಂಕ್ ದಕ್ಷಿಣ ಕನ್ನಡಕ್ಕೆ

Picture of Savistara

Savistara

Bureau Report

ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ)ಎಂಜಿನಿಯರಿಂಗ್ ವಿಭಾಗದ ಮೊದಲ 10 ಬ್ಯಾಂಕ್‌ಗಳಲ್ಲಿ ನಾಲ್ಕು ದಕ್ಷಿಣ ಕನ್ನಡ ಜಿಲ್ಲೆಗೆ ಲಭಿಸಿದೆ. ಮಂಗಳೂರು ನಗರದ ಕೊಟ್ಟಾರ ಕ್ರಾಸ್‌ನ ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜು ಮೂರು ಮತ್ತು ಬೆಳ್ತಂಗಡಿಯ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿಗೆ ಒಂದು ರ್ಯಾಂಕ್ ಲಭಿಸಿದೆ.

ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಇರಾ ಜೈನ್‌ ನಾಲ್ಕನೇ ಬ್ಯಾಂಕ್ ಗಳಿಸಿದ್ದು, ಐದನೇ ರ್ಯಾಂಕ್ ಕೂಡ ಇದೇ ಸಂಸ್ಥೆಗೆ ಲಭಿಸಿದೆ. ಸಂಸ್ಥೆಯ ರಿಪೊನ್ ಫೆರ್ನಾಂಡಿಸ್‌ ಈ ಸಾಧನೆ ಮಾಡಿದ್ದಾರೆ. ವಿದ್ವತ್ ಕಾಲೇಜಿನ ಚಿನ್ಮಯ್ ಜಿ.ಕೆ ಏಳನೇ ರ್ಯಾಂಕ್ ಪಡೆದಿದ್ದು, ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ಅಭಿ ಸಣ್ಣಯ್ಯ 8ನೇ ಬ್ಯಾಂಕ್ ಗಳಿಸಿದ್ದಾರೆ.ಕೃಷಿ ವಿಜ್ಞಾನದಲ್ಲಿ ಮಂಗಳೂರು ವಳಚ್ಚಿಲ್‌ನ ಎಕ್ಸ್‌ಪರ್ಟ್ ಕಾಲೇಜಿನ ಸಮಯ್ ಎ.ಎಸ್ ಮೂರನೇ ರ್ಯಾಂಕ್ ಗಳಿಸಿದ್ದು, ರಿಷಿಕಾ ಕೆ.ಎಸ್ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಕೊಡಿಯಾಲ್ ಬೈಲ್‌ ಶಾರದಾ ಕಾಲೇಜಿನ ಶ್ರೇಯಾ ಬಲ್ಲಾಳ್ ನಿಡಂಬೂರು 9ನೇ ಬ್ಯಾಂಕ್ ಪಡೆದಿದ್ದಾರೆ. ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ರಿಷಭ್ ಶೆಟ್ಟಿ ಬಿಎಸ್‌ಸಿ ನರ್ಸಿಂಗ್‌ನಲ್ಲಿ 8ನೇ ರ್ಯಾಂಕ್, ಎಕ್ಸ್‌ಪರ್ಟ್ ಕಾಲೇಜು ಮಂಗಳೂರು ಕ್ಯಾಂಪಸ್‌ನ ದೀಕ್ಷಾ ಶೆಣೈ, ಯೋಗ ಮತ್ತು ನ್ಯಾಚುರೊಪತಿಯಲ್ಲಿ 6ನೇ ಬ್ಯಾಂಕ್ ಗಳಿಸಿದ್ದಾರೆ. ಬಿ.ಫಾರ್ಮ ಮತ್ತು ಡಿ.ಫಾರ್ಮದಲ್ಲಿ ದಿ.ಲರ್ನಿಂಗ್ ಸೆಂಟರ್‌ನ ರಿಶೋನ್ ಫೆರ್ನಾಂಡಿಸ್‌ಗೆ 10ನೇ ಬ್ಯಾಂಕ್ ಲಭಿಸಿದೆ.

[t4b-ticker]
error: Content is protected !!