ಭಾರತದ ಸೇನಾದಾಳಿಯಲ್ಲಿ ಉಗ್ರ ಮಸೂದ್, ಹಫೀಜ್ ಸಯೀದ್ ಸಾವು?

Picture of Savistara

Savistara

Bureau Report

ಅಜರ್ ಭಾರೀ ಭದ್ರತೆಯಲ್ಲಿ ಈ ಪ್ರಧಾನ ಕಚೇರಿಯಲ್ಲೇ ವಾಸವಾಗಿದ್ದ ಎಂದು ವರದಿ ತಿಳಿಸಿದೆ.

ನವದೆಹಲಿ: ಪಹಲ್ಲಾಮ್ ಭಯೋತ್ಪಾದಕ ದಾಳಿಗೆಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ್ ದಾಳಿಯಲ್ಲಿ ಉ*ಗ್ರ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ ಕೂಡಾ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ ಎಂದು ವರದಿ ತಿಳಿಸಿದೆ.ಭಾರತದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಲಾಹೋರ್ ನಿಂದ 400 ಕಿಲೋ ಮೀಟರ್ ದೂರದಲ್ಲಿರುವ ಬಹಾವಲ್ಪುರದಲ್ಲಿರುವ ಜೈಶ್ ಎ ಮೊಹಮ್ಮದ್ ಪ್ರಧಾನ ಕಚೇರಿಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.ಸುಮಾರು 18ಕ್ಕೂ ಅಧಿಕ ಎಕರೆ ಜಾಗದಲ್ಲಿರುವ ಜೈಶ್‌ ಇ ಮೊಹಮ್ಮದ್ ಪ್ರಧಾನ ಕಚೇರಿ ಉ*ಗ್ರರ ನೇಮಕಾತಿ, ದೇಣಿಗೆ ಸಂಗ್ರಹ, ಉ*ಗ್ರ ಚಟುವಟಿಕೆಯ ಕೇಂದ್ರ ಸ್ಥಾನವಾಗಿದ್ದು, ಇದನ್ನು ಗುರಿಯಾಗಿರಿಸಿಕೊಂಡು ಭಾರತ ದಾಳಿ ನಡೆಸಿತ್ತು. ಜೆಇಎಂನ ಮೌಲಾನಾ ಮಸೂದ್ ಅಜರ್‌ ಬಹಾವಲ್ಪುರ್ ನಲ್ಲಿ ಜನಿಸಿದ್ದು, ಅಜರ್ ಭಾರೀ ಭದ್ರತೆಯಲ್ಲಿ ಈ ಪ್ರಧಾನ ಕಚೇರಿಯಲ್ಲೇ ವಾಸವಾಗಿದ್ದ ಎಂದು ವರದಿ ತಿಳಿಸಿದೆ.

ದಾಳಿಯಲ್ಲಿ ಲಷ್ಕ‌ರ್ ಮತ್ತು ಜೈಶ್ ಎ ಮೊಹಮ್ಮದ್ ಭಯೋ*ತ್ಪಾದಕ ಸಂಘಟನೆಯ ಹಲವು ಕಮಾಂಡ್ ಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಹಫೀಜ್ ಸಯೀದ್ ಹಾಗೂ ಅಜ‌ರ್ ಮಸೂದ್ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಸುದ್ದಿ ಇನ್ನಷ್ಟೇ ತಿಳಿಯಬೇಕಾಗಿದೆ.

[t4b-ticker]
error: Content is protected !!