ಬಿಜೆಪಿಯಿಂದ ಜಿಲ್ಲೆ, ವಿಭಾಗಗಳಿಗೆ ಸಂಯೋಜಕರ ನೇಮಕ

Picture of Savistara

Savistara

Bureau Report

ಪುತ್ತೂರು:ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಮತ್ತು ಮುಂಬರುವ ವಿವಿಧ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸುವ ಉದ್ದೇಶದಿಂದ ಬಿಜೆಪಿಯು ವಿವಿಧ ವಿಭಾಗ ಮತ್ತು ಜಿಲ್ಲೆಗಳಿಗೆ ಸಂಯೋಜಕರನ್ನು ನಿಯೋಜಿಸಿದೆ.ರಾಜ್ಯ ಬಿಜೆಪಿ ಕೋರ್ ಕಮಿಟಿ ಪದಾಧಿಕಾರಿಗಳನ್ನು ವಿಭಾಗಗಳಿಗೆ ಮತ್ತು ಪಕ್ಷದ ರಾಜ್ಯ ಪದಾಧಿಕಾರಿಗಳನ್ನು ಜಿಲ್ಲೆಗಳಿಗೆ ಸಂಯೋಜಕರಾಗಿ ನಿಯೋಜಿಸಿ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ಆದೇಶ ಮಾಡಿದ್ದಾರೆ. ಮಂಗಳೂರು ವಿಭಾಗಕ್ಕೆ ನಿರ್ಮಲ್‌ ಕುಮಾ‌ರ್ ಸುರಾನಾ, ಶಿವಮೊಗ್ಗ ವಿಭಾಗಕ್ಕೆ ಮಾಜಿ ಸಂಸದ ಮತ್ತು ಪಕ್ಷದ ರಾಜ್ಯ ಘಟಕದ

ಮಾಜಿ ಅಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಮತ್ತು ಬೆಂಗಳೂರು ವಿಭಾಗಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೆಂದ್ರ ಸಚಿವರೂ ಆಗಿರುವ ಡಿ.ವಿ.ಸದಾನಂದ ಗೌಡ ಅವರನ್ನು ಸಂಯೋಜಕರಾಗಿ ನಿಯೋಜಿಸಲಾಗಿದೆ.ಬೆಳಗಾವಿ ವಿಭಾಗಕ್ಕೆ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ನಿಯೋಜಿಸಲಾಗಿದೆ. ಜಿಲ್ಲಾವಾರು ಸಂಯೋಜಕರ ಪೈಕಿ ಕೊಡಗು ಮತ್ತು ಉಡುಪಿಗೆ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಹಾಗೂ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗಕ್ಕೆ ಮಾಜಿ ಸಚಿವೆ ರೂಪಾಲಿ ನಾಯ್ಕ ಮತ್ತು ಚಿಕ್ಕಗಳೂರು ಜಿಲ್ಲೆಗೆ ಮಾಜಿ ಸಚಿವ ಹರತಾಳ ಹಾಲಪ್ಪ ಹಾಲಪ್ಪ ಅವರನ್ನು ನಿಯೋಜಿಸಲಾಗಿದೆ.

[t4b-ticker]
error: Content is protected !!