ಪತಿಗೆ ಯಕೃತ್ತು ದಾನ ಮಾಡಿದ್ದ ಪತ್ನಿ | ದಂಪತಿ ಜೀವ ಕಸಿದ ಲಿವರ್ ಕಸಿ

Picture of Savistara

Savistara

Bureau Report

ಪತ್ನಿ ಯಕೃತ್ತು (ಲಿವರ್) ದಾನ ಮಾಡಿದ್ದು, ಶಸ್ತ್ರಚಿಕಿತ್ಸೆ ಬಳಿಕ ಇಬ್ಬರೂ ಸಾವಿಗೀಡಾದ ದುರಂತ ಪ್ರಕರಣವೊಂದು ನಡೆದಿದೆ. ಪುಣೆಯ ಬಾಪು ಕೋಮ್ಮರ್ ಹಾಗೂ ಮೃತಪಟ್ಟ ಕಾಮಿನಿ ದಂಪತಿ. ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಆ.15ರಂದು ಈ ಶಸ್ತ್ರಚಿಕಿತ್ಸೆಗಳು ನಡೆದಿದ್ದವು. ಪ್ರಕರಣ ಸಂಬಂಧ ಮಹಾರಾಷ್ಟ್ರ ಆರೋಗ್ಯ ಇಲಾಖೆ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ. ಕಾಮಿನಿ ತನ್ನ ಯಕೃತ್ತಿನ ಭಾಗವನ್ನು ಪತಿ ಬಾಪುಗೆ ದಾನ ಮಾಡಿದ್ದು, ಶಸ್ತ್ರಚಿಕಿತ್ಸೆ ಬಳಿಕ ಬಾಪು ಆರೋಗ್ಯ ಪರಿಸ್ಥಿತಿ ಹದಗೆಟ್ಟು ಆ.17ರಂದು ಮೃತರಾದರು. ನಂತರ ಪತ್ನಿಗೂ ಸೋಂಕು ಉಂಟಾಗಿದ್ದು, ಆಕೆ ಆ.21ರಂದು ಕೊನೆಯುಸಿರೆಳೆದರು. ‘ಇದು ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಇಬ್ಬರ ಸಾವಿನ ಸಂಬಂಧ ತನಿಖೆ ನಡೆಸಬೇಕು’ ಎಂದು ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

[t4b-ticker]
error: Content is protected !!