ಮಂಗಳೂರಿನಲ್ಲಿ ಡೆಲಾಯ್ಟ್ ಕೇಂದ್ರ ಸ್ಥಾಪನೆ: ಮುಂದಿನ 2 ವರ್ಷಗಳಲ್ಲಿ 1,000+ ಉದ್ಯೋಗಾವಕಾಶ: ಸಂಸದ ಕ್ಯಾ.ಚೌಟ

Picture of Savistara

Savistara

Bureau Report

ಮಂಗಳೂರು: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಪ್ರಯತ್ನ ಹಾಗೂ #BackToOoru ಅಭಿಯಾನದ ಫಲವಾಗಿ ಮಹತ್ವದ ಹೆಜ್ಜೆಯಾಗಿ MNC ಕಂಪನಿ ಡೆಲಾಯ್ಟ್ (Deloitte) ಮಂಗಳೂರಿನಲ್ಲಿ ತನ್ನ ಕೇಂದ್ರವನ್ನು ಸ್ಥಾಪಿಸಿದೆ.

ಮುಂದಿನ ಎರಡು ವರ್ಷಗಳಲ್ಲಿ 1,000ಕ್ಕೂ ಅಧಿಕ ವೃತ್ತಿಪರರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದು ತಿಳಿಸಲಾಗಿದೆ.

Advertisement

ಈ ಕುರಿತು ಸಂಸದ ಬ್ರಿಜೇಶ್ ಚೌಟ ಅವರು ಡೆಲಾಯ್ಟ್ ಪ್ರತಿನಿಧಿ ರೋಮಲ್ ಅವರಿಗೆ ನ.24, 2026ರಂದು ಪತ್ರ ಬರೆದು ಶುಭಾಶಯ ತಿಳಿಸಿದ್ದಾರೆ. ಜನವರಿಯಲ್ಲಿ ನಡೆದ TiECon IXE ಸಮ್ಮೇಳನದಲ್ಲಿ ನಡೆದ ಮೊದಲ ಮಾತುಕತೆಯಿಂದ ಮಂಗಳೂರಿನಲ್ಲಿ ಡೆಲಾಯ್ಟ್ ಬಾಗಿಲು ತೆರೆಯುವವರೆಗಿನ ಪ್ರಯಾಣ ಸಂತಸ ತಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement

ಮಂಗಳೂರನ್ನು ‘ಅವಕಾಶಗಳ ಸಾಗರ’ ಎಂದು ಬಣ್ಣಿಸಿದ ಸಂಸದರು, ಪ್ರತಿಭೆ ಮತ್ತು ಉದ್ಯಮಶೀಲತಾ ಮನೋಭಾವ ಹೊಂದಿರುವ ನಗರಕ್ಕೆ ಪ್ರಮುಖ ಸಂಸ್ಥೆಗಳನ್ನು ತರುವುದು ನಮ್ಮ ಗುರಿ ಎಂದು ಹೇಳಿದ್ದಾರೆ. ಈ ಮೂಲಕ ಸ್ಥಳೀಯ ಯುವಕರಿಗೆ ಮನೆಯ ಬಾಗಿಲಲ್ಲೇ ಉದ್ಯೋಗ ಸಿಗುವಂತಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Advertisement
[t4b-ticker]
error: Content is protected !!