ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣೇಶ ಚತುರ್ಥಿ ವಿಸರ್ಜನೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಮತ್ತು ಗಲಾಟೆಯ ಘಟನೆಯ ಬಗ್ಗೆ ಕೃಷಿ ಸಚಿವ ನಂ.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ‘ಈ ಗಲಾಟೆಯು ಮುಸ್ಲಿಮ ಸಮುದಾಯದ ಕಡೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು, ಹಿಂದೂಗಳನ್ನು ಯಾರೂ ಬಂಧಿಸಿಲ್ಲ. ಘಟನೆಗೆ ಸಂಬಂಧಿಸಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣೇಶ ಚತುರ್ಥಿ ವಿಸರ್ಜನೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಮತ್ತು ಗಲಾಟೆಯ ಘಟನೆಯ ಬಗ್ಗೆ ಕೃಷಿ ಸಚಿವ ನಂ. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ‘ಈ ಗಲಾಟೆಯು ಮುಸ್ಲಿಮ ಸಮುದಾಯದ ಕಡೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು, ಹಿಂದೂಗಳನ್ನು ಯಾರೂ ಬಂಧಿಸಿಲ್ಲ. ಘಟನೆಗೆ ಸಂಬಂಧಿಸಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.
ಬುಧವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಘಟನೆಯ ಹಿನ್ನೆಲೆಯಲ್ಲಿ 21 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಮ ಆದರೂ ಬಿಜೆಪಿಯವರು ಸಭೆ ನಡೆಸಿದರೆ ಅರ್ಥವಿದೆಯೇ’ ಎಂದು ಪ್ರಶ್ನಿಸಿದರು.
‘ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ರಾಜ್ಯ ಬಿಜೆಪಿ ಮುಖಂಡರಿಗೆ ನಾಚಿಕೆಯಾಗಬೇಕು. ಅವರ ಆಡಳಿತದಲ್ಲಿ ಈ ರೀತಿ ಘಟನೆಗಳು ನಡೆದಿಲ್ಲವೇ? ಕಾಂಗ್ರೆಸ್ ಅಧಿಕಾರದಲ್ಲೇ ಗಲಭೆಯಾಗುತ್ತದೆ ಎಂಬುದು ಸುಳ್ಳು. ಒಮ್ಮೆ ಹಿಂದೆ ತಿರುಗಿ ನೋಡಲಿ’ ಎಂದರು.
‘ಸ್ವಲ್ಪ ಭದ್ರತಾ ವೈಫಲ್ಯ ಆಗಿರುವ ಅನುಮಾನ ಇದೆ. ಈ ಗಲಭೆ ಹಿಂದೆ ಯಾರಿದ್ದಾರೆ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ’ ಎಂದರು.
‘ನನಗಿರುವ ಮಾಹಿತಿ ಪ್ರಕಾರ ಸಾಮೂಹಿಕ ಗಣಪತಿ ಮೆರವಣಿಗೆಗೆ ನಾಲೈದು ಗಣಪತಿಗಳು ಮಾತ್ರ ಇದ್ದವು. ಬೆಂಗಳೂರಿನಿಂದ ಖರೀದಿ ಮಾಡಿ ತಂದು ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಜೆಡಿಎಸ್‌ನವರು ಮಾಡಿದರು’ ಎಂದರು.











































