ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ಸೆ.15 ರಿಂದ ವಿದ್ಯುತ್‌ ಚಾಲಿತ: ಮಂಗಳೂರು- ಬೆಂಗಳೂರು ಮಧ್ಯೆ ವಂದೇ ಭಾರತ್‌ಗೂ ಹಾದಿ ಸುಗಮ

Picture of Savistara

Savistara

Bureau Report

ಪುತ್ತೂರು: ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣ ಗೊಂಡಿದ್ದು, ಸೆ.15ರಿಂದ ರೈಲುಗಳು ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚ ರಿಸಲಿವೆ. ಮುಂಜಾನೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸುಬ್ರಹ್ಮಣ್ಯ ರೋಡ್ ತಲುಪುವ ಪ್ಯಾಸೆಂಜರ್ ರೈಲು ಅಲ್ಲಿಂದ ಮರಳಿ ಮಂಗಳೂರು ತಲುಪುತ್ತಿದೆ. ಇದೇ ರೈಲು ಸಂಜೆಯೂ ಇದೇ ರೀತಿ ಮಂಗಳೂರಿನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬಂದು ರಾತ್ರಿ ಮಂಗಳೂರಿಗೆ ನಿರ್ಗಮಿಸುತ್ತದೆ.ಇವೆರಡು ಸೇವೆಗಳಲ್ಲದೆ ಮಧ್ಯಾಹ್ನವೂ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜ‌ರ್ ರೈಲು ಸೇವೆಯಿದೆ. ಈ ಮೂರು ಹೊತ್ತಿನ ರೈಲುಗಳು ಸೆ.15ರಿಂದ ವಿದ್ಯುತ್ ಚಾಲಿತ ಎಂಜಿನ್ ಮೂಲಕ ಸಂಚರಿಸಲಿವೆ.ಇದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ರೈಲ್ವೆ ಮಾಡಿಕೊಂಡಿದೆ. ರೈಲು aberid ಮೇಲ್ಬಾಗದಲ್ಲಿ ವಿದ್ಯುತ್ ತಂತಿಗಳನ್ನು ಜೋಡಿಸಲಾಗಿದ್ದು, ಇದಕ್ಕೆ ಎಂಜಿನ್ ಜತೆ ಸಂಪರ್ಕ ಕಲ್ಪಿಸಲಾಗುತ್ತದೆ. ಬುಧವಾರ ವಿದ್ಯುತ್ ಚಾಲಿತ ಎಂಜಿನ್ ಮಂಗಳೂರು-ಸುಬ್ರಹ್ಮಣ್ಯ ರೋಡ್ ನಡುವೆ ಯಶಸ್ವಿ ಸಂಚಾರ ನಡೆಸಿತು. ಕಳೆದ ಜೂನ್‌ನಿಂದ ಸುಬ್ರಹ್ಮಣ್ಯ ರೋಡ್- ಎಡಕುಮೇರಿ-ಹಾಸನ ನಡುವಿನ ಹಳಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣ ಗೊಂಡ ಬಳಿಕ ಮಂಗಳೂರು- ಬೆಂಗ ಳೂರು ರೈಲುಗಳು ಕೂಡಾ ವಿದ್ಯುತ್ ಚಾಲಿತಗೊಳ್ಳಲಿವೆ. ಭವಿಷ್ಯದಲ್ಲಿ ಮಂಗ ಳೂರು- ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಗೊ ಳ್ಳಲು ಇದು ಅವಕಾಶ ಮಾಡಿಕೊಡಲಿದೆ.

[t4b-ticker]
error: Content is protected !!