ಕುಕ್ಕುಜಡ್ಕ: ಇಂದು ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ

Picture of Savistara

Savistara

Bureau Report

ಸಾಹಿತಿಗಳ ಹುಟ್ಟೂರಿನಲ್ಲಿ ಸಾಹಿತ್ಯ ಲೋಕದ ಅನಾವರಣವಾಗಿದೆ. ಪುಸ್ತಕ ಓದುವ ಹವ್ಯಾಸವೇ ಸಾಹಿತಿಗಳಿಗೆ ಸಲ್ಲಿಸುವ ಕೃತಜ್ಞತೆಯಾಗುವುದು.ಚೊಕ್ಕಾಡಿ ಹೆಸರಿನಲ್ಲಿ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಯವರ ಮುನಿಸುತರವೇ ಭಾವಗೀತೆ ಕಣ್ಣ ಮುಂದೆ ಬರುವುದು ಸಹಜವಾಗಿದೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಹೇಳಿದರು.

ಅಮರಮುನ್ನೂರಿನ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯ ಅಬಸಮ ಸಭಾಂಗಣದ ಡಾ. ಪೈಲೂರು ಗೋಪಾಲಕೃಷ್ಣವೇದಿಕೆಯಲ್ಲಿ ಡಿ. 30 ರಂದುತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಂಟಮಲೆ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳ ಬಗ್ಗೆ ಅವಲೋಕನ ಮಾಡಿ ಬರೆಯಬಲ್ಲವರು ಸಾಹಿತಿಗಳು. ಸಾಹಿತಿಗಳು ಬರೆದ ಪುಸ್ತಕಗಳ ಬಗ್ಗೆ ಪ್ರಚಾರ ಪಡಿಸುವ ಕಾರ್ಯವಾಗಬೇಕು. ಸಾಹಿತ್ಯ ಕ್ಷೇತ್ರ ನಿಂತ ನೀರಾಗದೆ ಹರಿಯುವನೀರಿನಂತಾಗಬೇಕು. ಇಂತಹ ಸಾಹಿತ್ಯ ಲೋಕದಲ್ಲಿ ವ್ಯಸನ ಮುಕ್ತ, ಸಮಾಜಮುಖಿ ಪರಿವರ್ತನೆ ಯಾಗಲಿ. ಸಾಹಿತಿಗಳು ಆಕಾಶದಲ್ಲಿರುವ ನಕ್ಷತ್ರದಂತೆ ಸದಾ ಹೊಳೆಯುತ್ತಿರಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಮ್ಮೇಳನದ ಅಧ್ಯಕ್ಷ ಕೆ. ಆರ್. ತೇಜಕುಮಾರ್ ಬಡ್ಡಡ್ಕ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ” ಸಾಹಿತ್ಯದ ಉನ್ನತಿಗೆ ಇಲ್ಲಿನ ಜನರಾಡುವ ವಿಭಿನ್ನ ಭಾಷೆಗಳಸೊಗಡೆಂಬುದರಲ್ಲಿ ಸಂಶಯವಿಲ್ಲ. ಅರೆಭಾಷೆ, ಹವ್ಯಗನ್ನಡ, ಮರಾಟಿ, ಕೊಂಕಣಿ, ತುಳು ಇನ್ನಿತರ ಭಾಷೆಗಳು ಕ್ಷೀಣಿಸುತ್ತಿದೆ. ತುಳು, ಕೊಂಕಣಿ, ಬ್ಯಾರಿ, ಅರೆಭಾಷೆಗಳಿಗೆ ಸರಕಾರದ ನೆಲೆಯಲ್ಲಿ ಅಕಾಡೆಮಿ ಸ್ಥಾಪಿಸಿ ಭಾಷೆ ಉಳಿಯುವಿಕೆಗೆ ಶ್ರಮಿಸುತ್ತಿವೆ. ಪ್ರಚಲಿತದಲ್ಲಿರುವ ಹವ್ಯಗನ್ನಡಕ್ಕೆ ಅಕಾಡೆಮಿ ಬೇಕು. ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೆ ಹಂತ ಹಂತವಾಗಿ ಅಕಾಡೆಮಿ ಸ್ಥಾಪಿತವಾಗಬೇಕು. ಇದರಿಂದ ಸಂಸ್ಕೃತಿ ಗಳ ಉಳಿವಿಗೆ ಅನಿವಾರ್ಯವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಉದಯೋನ್ಮಖ ಸಾಹಿತಿಯೊಬ್ಬರ ಮೊದಲ ಕೃತಿಯೊಂದನ್ನು ಆಯ್ಕೆ ಮಾಡಿ ಸಮ್ಮೇಳನದ ಪುಸ್ತಕವೆಂದು ಪ್ರಕಟಿಸಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಸ್ತಾಪಿಸಿದರು.

ಸಮ್ಮೇಳನವನ್ನು ದೀಪ ಪ್ರಜ್ವಲಿಸಿ ಹಿರಿಯ ಸಾಹಿತಿಗಳಾದ ಕೆ. ಪಿ.ಸುರೇಶ ಕಂಜರ್ಪಣೆ ಯವರು ಉದ್ಘಾಟಿಸಿದರು.ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹೊರತಂದಿರುವ ಬಂಟಮಲೆ ಸ್ಮರಣ ಸಂಚಿಕೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಬಿಡುಗಡೆ ಮಾಡಿದರು.ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಯವರು ಸಮ್ಮೇಳನಾಧ್ಯಕ್ಷ ತೇಜಕುಮಾರ್ ರವರು ಬರೆದ ಮಜಲಿನಾಚೆ, ಮಮತಾ ರವೀಶ್ ಪಡ್ಡಂಬೈಲು ರವರು ಬರೆದ ಗುಬ್ಬಿದನಿ ಎಂಬ ಹೊಸ ಕೃತಿಗಳನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ನಿಕಟ ಪೂರ್ವಾಧ್ಯಕ್ಷೆ ಶ್ರೀಮತಿ ಲೀಲಾ ದಾಮೋದರ, ದ. ಕ. ಜಿಲ್ಲಾ ಕಸಾಪದ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ, ಅಮರಮುಳ್ಳೂರು ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷ ಕೇಶವ ಕಾಮತ್, ಸ್ವಾಗತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್‌ ಮಾಡಬಾಕಿಲು, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ಗೌರವ ಕಾರ್ಯದರ್ಶಿ ಚಂದ್ರಮತಿ ಕೆ, ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಸಾಹಿತಿ ಬಾಬು ಗೌಡ ಅಕ್ರಪ್ಪಾಡಿ, ಚಂದ್ರಾವತಿ ಬಡ್ಡಡ್ಕ, ಕೋಶಾಧಿಕಾರಿ ಅರುಣ ಕುಮಾರ ಮುಂಡಾಜೆ ಉಪಸ್ಥಿತರಿದ್ದರು.ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ರವರು ಪ್ರಸ್ತಾವನೆ ಮಾಡಿದರು.ಸ್ವಾಗತ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿದರು.ಸಾಹಿತಿ ಎ. ಕೆ. ಹಿಮಕರ ರವರುಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು.

ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು ವಂದಿಸಿದರು. ಚರಿಷ್ಮಾ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ಕಡಪಳ, ಶ್ರೀಮತಿ ಭವ್ಯ ಸಹಕರಿಸಿದರು.

[t4b-ticker]
error: Content is protected !!