ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಹಸ್ರ ಕಲಶ, ಅಷ್ಟ ಬಂಧ ಬ್ರಹ್ಮಕಲಶೋತ್ಸವ | ಜಗತ್ತಿಗೆ ಒಳಿತನ್ನು ಬಯಸುವ ಶ್ರೇಷ್ಠವಾದ ಸನಾತನ ಧರ್ಮ ನಮ್ಮದು : ಪ್ರಸನ್ನ ದರ್ಬೆ

Picture of Savistara

Savistara

Bureau Report

ಕರಾಯ: ನಾವು ಸನಾತನ ಸಂಸ್ಕೃತಿಯ ಪರಿಪಾಲಕರು,ಪ್ರಕೃತಿಯ ಆರಾಧಕರು ಇಂತಹ ಉದಾತ್ತ ಚಿಂತನೆ ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲವೆಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆಯವರು ಮಹಾಲಿಂಗೇಶ್ವರ ಕ್ಷೇತ್ರದ ಕರಾಯ ಸಹಸ್ರ ಕಲಶ ಮತ್ತು ಅಷ್ಟ ಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ನೂರಾರು ಸ್ವಯಂಸೇವಕರ ನಿಷ್ಠೆ, ದುಡಿಮೆ,

ಸಹಕಾರದಿಂದ ಕರಾಯ ದಲ್ಲಿ ವಿಜೃಂಭಣೆ ಯಿಂದ ಬ್ರಹ್ಮ ಕಲಶ ಕಾರ್ಯಕ್ರಮ ನಡೆದಿದ್ದು ಮುಂದಿನ ದಿನಗಳಲ್ಲಿ ನಾವೆಲ್ಲರೂ ಇದೇ ರೀತಿಯ ಸಂಘಟಿತ ಶಕ್ತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಯೆಂದು ಪ್ರಸನ್ನ ದರ್ಬೆ ಮಾತನಾಡುತ್ತ ತಿಳಿಸಿದರು.

ಈ ವೇಳೆ ಶಾಸಕ ಹರೀಶ್ ಪೂಂಜಾ, ಬ್ರಹ್ಮಕಲಶೋತ್ಸವ ಅಧ್ಯಕ್ಷ ಅಜಿತ್ ಕುಮಾರ್ ಹಳೇಜ್ಜಿ, ಜಿಣೋಧ್ದಾರ ಸಮಿತಿ ಅಧ್ಯಕ್ಷ ಸುದರ್ಶನ್,ಗೋಪಾಲಕೃಷ್ಣ ಕುಡ್ವಣ್ಣಯ, ಕೆ ಚರಣ್ ನಿವೃತ್ತ ಆರ್ ಟಿಓ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

[t4b-ticker]
error: Content is protected !!