ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೈಂದೂರು ವಿಧಾನಸಭಾ ವ್ಯಾಪ್ತಿಯ, ಕುಂದಾಪುರ ತಾಲ್ಲೂಕಿನ ಮಚ್ಚಟ್ಟು ಗ್ರಾಮದ (ತೊಂಬಟ್ಟು ಕಸಿನಪಾಳು) ಶ್ರೀ ಪ್ರೀತಮ್ ಜಿ ಅವರಿಗೆ ಸಂಸದ ಬಿವೈ ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ ಶ್ರೀ ಗಣಪತಿ ಪೂಜಾರಿ ಮತ್ತು ಶ್ರೀಮತಿ ನಾಗರತ್ನ ಪೂಜಾರಿ ದಂಪತಿಯ ಸುಪುತ್ರರಾದ ಪ್ರೀತಮ್, ಗ್ರಾಮೀಣ ಭಾಗದ ಸೌಲಭ್ಯಗಳ ನಡುವೆಯೂ ತಮ್ಮ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನಿಮ್ಮ ಈ ಸಾಧನೆ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ.ಪ್ರೀತಮ್ ಅವರ ಮುಂದಿನ ಉನ್ನತ ಶಿಕ್ಷಣವು ಯಶಸ್ವಿಯಾಗಿ ಸಾಗಲಿ, ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ. ಪೋಷಕರಿಗೂ ಹಾಗೂ ತರಬೇತಿ ನೀಡಿದ ಶಿಕ್ಷಕ ವೃಂದಕ್ಕೂ ಈ ವೇಳೆ ಅಭಿನಂದನೆ ಸಲ್ಲಿಸಿದ್ದಾರೆ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರ ಪ್ರೀತಮ್ ಪೂಜಾರಿ| ಸಂಸದ ಬಿವೈ ರಾಘವೇಂದ್ರರಿಂದ ಅಭಿನಂದನೆ ಸಲ್ಲಿಕೆ
Savistara
Bureau Report
[t4b-ticker]












































