ಕೊಲ್ಲೂರು ದೇಗುಲದ ಆದಾಯದಲ್ಲಿ ಹೆಚ್ಚಳ ಈ ಬಾರಿ 71 ಕೋಟಿ ರೂ. ಸಂಗ್ರಹ

Picture of Savistara

Savistara

Bureau Report

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಕೇರಳ,ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಂದ, ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಇದೀಗ ಕ್ಷೇತ್ರದ ವಾರ್ಷಿಕ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು ಈ ಬಾರಿ ಆದಾಯ ಎಪ್ಪತ್ತೊಂದು ಕೋಟಿ ರೂ. ದಾಟಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮೂರು ಕೋಟಿ ರೂ. ಹೆಚ್ಚಳ ಕಂಡಿದೆ.

ಸುಬ್ರಹ್ಮಣ್ಯ ದೇವಸ್ಥಾನ ಹೊರತುಪಡಿಸಿ ರಾಜ್ಯದಲ್ಲೇ ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಈ ಮೂಕಾಂಬಿಕಾ ಕ್ಷೇತ್ರ ಪಾತ್ರವಾಗಿದೆ. ಇಲ್ಲಿ ಪ್ರತೀದಿನ ಹನ್ನೆರಡು ಚಂಡಿಕಾ ಹೋಮಗಳು ನಡೆಯುತ್ತದೆ. ಇದರ ವಾರ್ಷಿಕ ಆದಾಯವೇ ಒಂದು ಕೋಟಿಗೂ ಅಧಿಕ ಬರುತ್ತದೆ. ಈಗೀಗ ಲಡ್ಡು ಪ್ರಸಾದಕ್ಕೆ ಕೂಡಾ ಭಾರೀ ಬೇಡಿಕೆ ಇದ್ದು ಪ್ರತಿದಿನ ಪ್ರಸಾದದ ರೂಪದಲ್ಲಿ ಆರು ಸಾವಿರಕ್ಕೂ ಅಧಿಕ ಲಡ್ಡು ವಿತರಣೆಯಾಗುತ್ತಿದೆ.
ಭಕ್ತರ ಹಣವನ್ನು ಸಾಮಾಜಿಕ ಸೇವೆಗೂ ಕೂಡಾ ದೇಗುಲ ವಿನಿಯೋಗಿಸುತ್ತಿದೆ. ಕಾಣಿಕೆ ರೂಪದಲ್ಲಿ ಚಿನ್ನಾಭರಣ, ಚಂಡಿಕಾ ಹೋಮ, ನಿತ್ಯ ಪೂಜೆ, ಆನ್ಲೈನ್ ಬುಕ್ಕಿಂಗ್ ಕೂಡಾ ಆದಾಯದ ಭಾಗವಾಗಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!