ರಸ್ತೆಯಲ್ಲೇ ಆಜಾದಿ ಘೋಷಣೆ, 10 ಕಿಮೀ ಜಾಮ್! ರೋಡ್‌ನಲ್ಲೇ ಸಿಲುಕಿಕೊಂಡ ಆ್ಯಂಬುಲೆನ್ಸ್!

Picture of Savistara

Savistara

Bureau Report

ಮಂಗಳೂರು: ವಕ್ಫ್ ಕಾಯ್ದೆ (Waqf Act) ವಿರುದ್ಧದ ಪ್ರತಿಭಟನೆಯಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (Mangaluru-Bengaluru National Highway) ಸಂಪೂರ್ಣ ಬಂದ್ ಆಗಿದೆ. ಸುಮಾರು 10 ಕಿಲೋ ಮೀಟರ್‌ವರೆಗೆ ನ್ಯಾಷನಲ್ ಹೈವೇ ಬಂದ್ ಮಾಡಿ, ಪ್ರತಿಭಟನೆ ಮಾಡಲಾಗಿದೆ. ಇನ್ನು ಈ ವೇಳೆ ಆ್ಯಂಬುಲೆನ್ಸ್ (ambulance) ತೆರಳಲೂ ಜಾಗ ನೀಡದೇ, ಪ್ರತಿಭಟನೆ ನಡೆಸಲಾಗಿದೆ. ಇನ್ನು ರಸ್ತೆ ತಡೆದ ಪ್ರತಿಭಟನಾ ನಿರತ ಮುಸ್ಲಿಂ ಯುವಕರು, ರಸ್ತೆ ಮಧ್ಯೆಯೇ ಆಜಾದಿ ಘೋಷಣೆ (Azadi slogan) ಕೂಗಿದ್ದಾರೆ. 10 ಕಿಲೋ ಮೀಟರ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಬ್ಲಾಕ್

ವಕ್ಫ್ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಈ ವೇಳೆ ಆ್ಯಂಬುಲೆನ್ಸ್ ತೆರಳಲೂ ಜಾಗ ನೀಡದೇ, ಪ್ರತಿಭಟನೆ ನಡೆಸಲಾಗಿದೆ. ಕೆಲವರು ರಸ್ತೆ ಮಧ್ಯೆಯೇ ಆಜಾದಿ ಘೋಷಣೆ ಕೂಗಿದ್ದಾರೆ.

10 ಕಿಲೋ ಮೀಟರ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಬ್ಲಾಕ್ಮಂಗಳೂರು ವಕ್ಛ್ ತಿದ್ದುಪಡಿ ಕಾನೂನು ವಿರುದ್ದ ಪ್ರತಿಭಟನಾ ಸಮಾವೇಶದಲ್ಲಿ ಮಂಗಳೂರು ಬೆಂಗಳೂರು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸುಮಾರು 10 ಕೀಲೋ ಮಿಟರ್‌ವರೆಗೆ ರಸ್ತೆ ಬ್ಲಾಕ್ ಮಾಡಲಾಗಿತ್ತು. ರಸ್ತೆ ಬ್ಲಾಕ್ ಮಾಡಿರುವ ಪ್ರತಿಭಟನಾ ನಿರತ ಮುಸ್ಲಿಂ ಯುವಕರು, ರಾಷ್ಟ್ರೀಯ ಹೆದ್ದಾರಿಯಲ್ಲೇ ಆಜಾದಿ ಘೋಷಣೆ ಕೂಗಿದ್ದಾರೆ.

ಪ್ರತಿಭಟನೆ ವೇಳೆ ಸಿಲುಕಿಕೊಂಡ ಆ್ಯಂಬುಲೆನ್ಸ್

ಇನ್ನು ವಾಹನ ಸಂಚಾರ ತಡೆದು ಪ್ರತಿಭಟನಾನ ನಿರತರು ಆಜಾದಿ ಘೋಷಣೆ ಕೂಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಆ್ಯಂಬುಲೆನ್ಸ್ ಒಂದು ಸಿಲುಕಿಕೊಂಡು, ಮುಂದೆ ತೆರಳಲಾಗದೇ ಆ್ಯಂಬುಲೆನ್ಸ್ ಚಾಲಕ ಹರಸಾಹಸ ಪಡಬೇಕಾಯ್ತು. ರಸ್ತೆಯಲ್ಲಿ ವಾಹನ ಸಂಚಾರ ತಡೆದು ಯುವಕರು ಘೋಷಣೆ ಕೂಗಿದ್ದು, ಯುವಕರನ್ನು‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಬುಲ್ಡೋಜರ್‌ಗಳ ಇಂಧನ ಖಾಲಿಯಾಗಲಿದೆ

ಪ್ರತಿಭಟನಾ ಸಮಾವೇಶದಲ್ಲಿ ಉಲೇಮಾ ಕಮಿಟಿ ಕೋಶಾಧಿಕಾರಿ ಶಾಫಿ ಸಅದಿ ಮಾತನಾಡಿ, ಮೇ 5ರಂದು ಸುಪ್ರೀಂಕೋರ್ಟ್ ಈ ಕಾಯ್ದೆ ತಂದವರನ್ನು ಬೀದಿಗೆ ತರಲಿದೆ, ಮೇ 5ರಂದು ಬುಲ್ಡೋಜರ್‌ಗಳ ಇಂಧನ ಖಾಲಿಯಾಗಲಿದೆ ಎಂದಿದ್ದಾರೆ.

ಹಿಂದೂಗಳ ಆಸ್ತಿಯನ್ನು ವಕ್ಫ್ ಮುಟ್ಟಿಲ್ಲ

ಈ ಹೋರಾಟ, ಪಕ್ಷ ಧರ್ಮ ಜಾತಿಯ ವಿರುದ್ಧದ ಹೋರಾಟ ಅಲ್ಲ. ಈ ಹೋರಾಟ ಕೋಮುವಾದಿ ಫ್ಯಾಸಿಸ್ಟ್‌ಗಳ ವಿರುದ್ಧ ಹೋರಾಟವಾಗಿದೆ. ರಾಜೀವ್ ಗಾಂಧಿ ಸರ್ಕಾರದ ಸಂಧರ್ಭದಲ್ಲಿ ಶಾಬಾನು ಕೇಸ್ ವಿರುದ್ಧವೂ ಉಲೇಮಾಗಳು ಒಂದಾಗಿದ್ದರು. ಯಾವ ಹಿಂದೂಗಳ ಆಸ್ತಿಯನ್ನು ವಕ್ಫ್ ಮಂಡಳಿ ಮುಟ್ಟಿಲ್ಲ. ಕರ್ನಾಟಕದಲ್ಲಿ ಇತರ ಧರ್ಮೀಯರ ಆರಾಧನಾ ವಿಚಾರದಲ್ಲಿ ವಕ್ಫ್ ಮಂಡಳಿ ಹಸ್ತಕ್ಷೇಪ ಮಾಡಿಲ್ಲ ಅಂತ ಹೇಳಿದ್ರು.

26 ಲಕ್ಷ ಎಕರೆ ವಕ್ಫ್ ಆಸ್ತಿ ಕಬಳಿಸೋ ಹುನ್ನಾರ

26 ಲಕ್ಷ ಎಕ್ರೆ ವಕ್ಫ್ ಆಸ್ತಿಯನ್ನು ಕಬಳಿಸುವ ತಂತ್ರಗಾರಿಕೆ ಕೇಂದ್ರ ಸರ್ಕಾರದ್ದು ಆಗಿದೆ. ಯಾರಿಗೂ ಇಲ್ಲದ ಕಾನೂನನ್ನು ಮುಸ್ಲಿಮರಿಗೆ ಹೇರಲಾಗಿದೆ. ನಾನು ನನ್ನ ಜಾಗವನ್ನು ವಕ್ಫ್ ಮಾಡಬೇಕಾದರೆ ಐದು ವರ್ಷ ಮುಸ್ಲಿಂ ಧರ್ಮ ಕಲಿಯಬೇಕಂತೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ದುಃಖ ತೋರಿಸಲು ಇಲ್ಲಿ ಒಂದಾಗಿದ್ದೇವೆ

ಇನ್ನು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಕ್ಫ್ ದಕ್ಷಿಣ ಕನ್ನಡ ಅಧ್ಯಕ್ಷ ನಾಸೀರ್, ಸಮುದಾಯದ ದುಃಖ ತೋರಿಸಲು ಇಲ್ಲಿ ಒಂದಾಗಿದ್ದೇವೆ. ಅಕ್ಕಪಕ್ಕದ ಜಿಲ್ಲೆಗಳಿಂದ ಜನಸಾಗರ ಬಂದಿದೆ. ಸರ್ಕಾರ ಮುಸ್ಲಿಮರ ಆರ್ಥಿಕ ಶಕ್ತಿಗಾಗಿ ಈ ಬಿಲ್ ಪಾಸ್ ಮಾಡಿದ್ದೇವೆ ಅಂತಾ ಹೇಳಿದೆ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿಯ ಹಣ ಕಡಿತಗೊಳಿಸಿದ್ಯಾಕೆ? ನಿಮ್ಮ ಕ್ಯಾಬಿನೆಟ್ ನಲ್ಲಿ ಸಮುದಾಯದ ಒಬ್ಬನಾದ್ರೂ ಇದ್ದಾನಾ? ಅಂತ ಪ್ರಶ್ನಿಸಿದ್ರು. ನಮಗೆ ಸುಪ್ರೀಂಕೋರ್ಟ್‌ನ ಮೇಲೆ ಭರವಸೆ ಇದೆ ಅಂತ ನಾಸೀರ್ ಹೇಳಿದ್ರು.

[t4b-ticker]
error: Content is protected !!