ಗಮನಿಸಿ, ಆಗಸ್ಟ್1 ರಿಂದ ಬದಲಾಗಲಿವೆ ಈ ನಿಯಮಗಳು…

Picture of Savistara

Savistara

Bureau Report

ತಿಂಗಳ ಆರಂಭದಲ್ಲಿ ಒಂದಷ್ಟು ಬದಲಾವಣೆಗಳು ಸಾಮಾನ್ಯವಾಗಿರುತ್ತವೆ. ಇನ್ನೇನು ಆಗಸ್ಟ್ ಬರುತ್ತಿದೆ. ಒಂದನೇ ತಾರೀಕಿನಿಂದ ತತ್ಕಾಲ್ ರೈಲು ಟಿಕೆಟ್ ಬುಕಿಂಗ್‌ನಲ್ಲಿನ ಬದಲಾವಣೆ, ಆದಾಯ ತೆರಿಗೆ ಪಾವತಿ, ಎಲ್‌ಪಿಜಿ ಸಿಲಿಂಡರ್ ಬೆಲೆ ಸೇರಿದಂತೆ ಏನೆಲ್ಲಾ ಬದಲಾವಣೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ…

ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ

ಕೌಂಟ‌ರ್ ಎದುರು ಜನರು ನಿಂತರೆ ನೂಕುನುಗ್ಗಲು ಉಂಟಾಗಲಿದೆ ಎನ್ನುವ ಕಾರಣಕ್ಕೆ ಟೋಕನ್ ವ್ಯವಸ್ಥೆ ಮಾಡಲಾಗುತ್ತಿದೆ. ಈವರೆಗೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರಯಾಣಿಕರು ಪ್ರತ್ಯೇಕ ಕೌಂಟರ್‌ಗಳಿಗೆ ಭೇಟಿ ನೀಡಬೇಕಿತ್ತು. ತತ್ಕಾಲ್‌ ಬುಕಿಂಗ್ ಪ್ರಾರಂಭವಾಗುವ ಸಮಯದಲ್ಲಿ ಟೋಕನ್ ವಿತರಣಾ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದೆ. ಆದರೆ ನೈರುತ್ಯ ರೈಲ್ವೆಯಿಂದ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಐಟಿಆ‌ರ್ ಪಾವತಿ ತಪ್ಪಿಸಿಕೊಂಡರೆ

ಐಟಿಆರ್ -1 ಮತ್ತು ಐಟಿಆರ್-2 ಪಾವತಿಗೆ ಜುಲೈ 31 ಕೊನೆ ದಿನ. ಒಂದು ವೇಳೆ ಆದಾಯ ತೆರಿಗೆ ಪಾವತಿ ತಪ್ಪಿಸಿಕೊಂಡರೆ, ಆಗಸ್ಟ್1ರ ನಂತರ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ಅಲ್ಲದೆ, ತೆರಿಗೆ ಪ್ರಯೋಜನಗಳ ಲಭ್ಯತೆ ಮತ್ತು ನಿರ್ದಿಷ್ಟ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ಅವಕಾಶ ಕೈತಪ್ಪಬಹುದು.

ಎಲ್‌ಪಿಜಿ ದರದಲ್ಲಿ ವ್ಯತ್ಯಾಸ ಸಾಧ್ಯತೆ

ಆ.1ರಿಂದ ತೈಲ ಕಂಪನಿಗಳು ಎಲ್‌ಪಿಜಿ ದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಮುಂದುವರಿದಿರುವ ಕಾರಣ ಸಿಲಿಂಡ‌ರ್ ಬೆಲೆಯಲ್ಲಿ ಮಾರ್ಪಾಡುವ ಸಂಭವವಿದೆ.

ಕ್ರೆಡಿಟ್ ಕಾರ್ಡ್

ಬ್ಯಾಂಕ್ ಗಳು ಕ್ರೆಡಿಟ್‌ ಕಾರ್ಡ್ ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ರಿವಾರ್ಡ್ ಪಾಯಿಂಟ್‌ಗಳು, ಶುಲ್ಕಗಳು ಮತ್ತು ಇತರ ಸೇವೆಗಳು ಸೇರಿದಂತೆ ಇತರ ನಿಯಮ ಪರಿಷ್ಕರಣೆಯಾಗಬಹುದು. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರದ ಕುರಿತು ತೆಗೆದುಕೊಳ್ಳುವ ನಿರ್ಧಾರವು ಸಾಲದ ಇಎಂಐ ಮತ್ತು ಸ್ಥಿರ ಠೇವಣಿಯ ಮೇಲೆ ಪರಿಣಾಮ ಬೀರಬಹುದು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!