RCB ಬ್ರಾಂಡ್ ಮೌಲ್ಯ ₹2869 ಕೋಟಿ: ಈ ಸಾಧನೆ ಮಾಡಿದ ಮೊದಲ ಕ್ರಿಕೆಟ್ ಫ್ರಾಂಚೈಸಿ

Picture of Savistara

Savistara

Bureau Report

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಬ್ರಾಂಡ್ ಮೌಲ್ಯವು 300 ಮಿಲಿಯನ್ ಡಾಲರ್ (₹2869 ಕೋಟಿ) ತಲುಪಿದೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕ್ರಿಕೆಟ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯೊಂದು ತಿಳಿಸಿದೆ.

ಐಪಿಎಲ್‌ನ ವ್ಯಾಪಾರ ಉದ್ಯಮದ ಮೌಲ್ಯವು 2026ರಲ್ಲಿ ಶೇ 11.4 ಏರಿಕೆ ಕಂಡಿದ್ದು, 20.6 ಬಿಲಿಯನ್ ಡಾಲರ್‌ಗೆ (₹1,97,075 ಕೋಟಿ) ತಲುಪಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲಿನ ಏರಿಕೆಯು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್‌ ಹೌಲಿಹಾನ್ ಲೋಕಿ ತನ್ನ ವರದಿಯಲ್ಲಿ ತಿಳಿಸಿದೆ.2025ರಿಂದ ಆರ್‌ಸಿಬಿಯ ಬ್ರಾಂಡ್‌ ಮೌಲ್ಯವು ಶೇ.16ರಷ್ಟು ಏರಿಕೆಯಾಗಿದೆ. ಒಟ್ಟು 312 ಮಿಲಿಯನ್ ಡಾಲ‌ರ್ ಬ್ರಾಂಡ್ ಮೌಲ್ಯ ಹೊಂದುವ ಮೂಲಕ ಐಪಿಎಲ್‌ನಲ್ಲಿ ಅತಿದೊಡ್ಡ ಬ್ರಾಂಡ್‌ ಮೌಲ್ಯ ಹೊಂದಿದ ತಂಡವಾಗಿದೆ. ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ (264 ಮಿಲಿಯನ್ ಡಾಲರ್), ಕೋಲ್ಕತ್ತ ನೈಟ್ ರೈಡರ್ಸ್(245 ಮಿಲಿಯನ್ ಡಾಲರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್(244 ಮಿಲಿಯನ್ ಡಾಲರ್) ತಂಡಗಳಿವೆ.ಆರ್‌ಸಿಬಿ ತಂಡದ ಮಾಲಿಕತ್ವ ಬದಲಾವಣೆ ಮತ್ತು ಸತತ ಪ್ರಶಸ್ತಿ ಗೆದ್ದ ಬಳಿಕ ತಂಡದ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆಯಾಗಿದೆ. ರಜತ್ ಪಾಟೀದಾರ್ ನಾಯಕತ್ವದ ತಂಡವು 2025, 2026ರಲ್ಲಿ ಎರಡು ಬಾರಿ ಟ್ರೋಫಿ ಗೆದ್ದಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!