ಬೆಳ್ತಂಗಡಿ : ದಿಡುಪೆ ಜಲಪಾತದಲ್ಲಿ ಪುಂಡಾಟ: ಅರಣ್ಯ ಇಲಾಖೆ ವಾಚ‌ರ್ ಮೇಲೆ ಹಲ್ಲೆ ನಡೆಸಿ 50,500 ರೂ. ದೋಚಿ ಪರಾರಿಯಾದ ಯುವಕರು!

Picture of Savistara

Savistara

Bureau Report

ಬೆಳ್ತಂಗಡಿ: ಡಿಜಿಟಲ್ ರಶೀದಿ ನೀಡುವಂತೆ ಆಗ್ರಹಿಸಿ, ಪ್ರವೇಶ ಶುಲ್ಕ ಸಂಗ್ರಹಿಸುತ್ತಿದ್ದ ಅರಣ್ಯ ಇಲಾಖೆಯ ಗುತ್ತಿಗೆ ವಾಚ‌ರ್ ಮೇಲೆ 15 ಜನ ಯುವಕರ ಗುಂಪೊಂದು ಹಲ್ಲೆ ನಡೆಸಿ, ಬ್ಯಾಗ್‌ನಲ್ಲಿದ್ದ 50,500 ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಜುಲೈ 19ರಂದು ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರತಾಪ್‌ ಬನ್ನಲ್ ಹಾಗೂ ಆತನ ಜೊತೆಯಲ್ಲಿದ್ದ ಇತರ ಯುವಕರ ವಿರುದ್ಧ ದೂರು ದಾಖಲಾಗಿದೆ.

ಏನಾಯಿತು ?

ಕುದುರೆಮುಖ ರಾಷ್ಟ್ರೀಯ ಉದ್ಯಾನವನ (ಬೆಳ್ತಂಗಡಿ ವನ್ಯಜೀವಿ ವಲಯ) ವ್ಯಾಪ್ತಿಯ ಮಲವಂತಿಗೆ ಗ್ರಾಮದ ಪ್ರಸಿದ್ಧ ದಿಡುಪೆ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕರ್ತವ್ಯದಲ್ಲಿ ಗುತ್ತಿಗೆ ಆಧಾರಿತ ವಾಚ‌ರ್ ಗೋಪಾಲ (42) ನಿರತರಾಗಿದ್ದರು.

ಪ್ರವೇಶ ಪಡೆದ ಯುವಕರು: ಮಧ್ಯಾಹ್ನ ಸುಮಾರು 12:55ರ ವೇಳೆಗೆ 15 ಯುವಕರ ಗುಂಪು ಜಲಪಾತ ವೀಕ್ಷಣೆಗೆ ಆಗಮಿಸಿದೆ. ಎಲ್ಲರೂ ವಯಸ್ಕರಾಗಿದ್ದ ಕಾರಣ ನಿಯಮದಂತೆ ತಲಾ 200 ರೂ.ನಂತೆ ಒಟ್ಟು 3,000 ರೂ. ಶುಲ್ಕ ಪಡೆಯಲಾಗಿತ್ತು.

ಕೈಬರಹದ ರಶೀದಿ: ಪ್ರತಾಪ್ ಬನ್ಮಲ್ ಎಂಬಾತನ ಗುರುತಿನ ಚೀಟಿ ಪಡೆದು, ವಿವರಗಳನ್ನು ನೋಂದಣಿ ಪುಸ್ತಕದಲ್ಲಿ ದಾಖಲಿಸಿಕೊಂಡ ವಾಚರ್ ಗೋಪಾಲ, ಶುಲ್ಕಕ್ಕೆ ಪ್ರತಿಯಾಗಿ ಕೈಬರಹದ ರಶೀದಿ ನೀಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಊಟದ ಸಮಯ ನೋಡಿ ಗಲಾಟೆ!

ಮಧ್ಯಾಹ್ನ 1:40ರ ವೇಳೆಗೆ ಬೀಟ್ ಫಾರೆಸ್ಟ್ ಅಧಿಕಾರಿ ಭರತ್‌ ಅವರು ಊಟಕ್ಕೆ ತೆರಳಿದ್ದನ್ನೇ ಕಾಯುತ್ತಿದ್ದ ಯುವಕರ ಗುಂಪು, ವಾಪಸ್ ಬಂದು “ನಮಗೆ ಡಿಜಿಟಲ್ ರಶೀದಿಯೇ ಬೇಕು” ಎಂದು ತಕರಾರು ತೆಗೆದಿದೆ. “ಡಿಜಿಟಲ್ ರಶೀದಿ ಯಂತ್ರ ತಾಂತ್ರಿಕ ಸಮಸ್ಯೆಯಿಂದ ಹಾಳಾಗಿದೆ” ಎಂದು ವಾಚರ್ ಎಷ್ಟೇ ವಿನಂತಿಸಿಕೊಂಡರೂ ಕೇಳದೆ ಯುವಕರು ಗಲಾಟೆ ಆರಂಭಿಸಿದ್ದಾರೆ.ಈ ವೇಳೆ ಪ್ರತಾಪ್‌ ಬನ್ಮಲ್ ಎಂಬಾತ ಗೋಪಾಲ ಅವರನ್ನು ತಡೆದು ನಿಲ್ಲಿಸಿ, “ಕೂಡಲೇ ನಮ್ಮ ಹಣ ವಾಪಸ್ ನೀಡು” ಎಂದು ಬೆದರಿಕೆ ಹಾಕಿ ಕೈಯಿಂದ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಇತರ ಯುವಕರು ಸೇರಿಕೊಂಡು, ಗೋಪಾಲ ಅವರ ಬಳಿ ಇಲಾಖೆಯ ಪ್ರವೇಶ ಶುಲ್ಕ ಸಂಗ್ರಹದ ಒಟ್ಟು 50,500 ರೂ. ನಗದು ಇರಿಸಲಾಗಿದ್ದ ಬ್ಯಾಗ್ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!