BREAKING NEWS | ವಾಹನ ಸವಾರರಿಗೆ ಬಿಗ್ ಶಾಕ್ | ಇ -20 ಪೆಟ್ರೋಲ್ ನಿಂದ ವಾಹನ ಮೈಲೇಜ್ ಇಳಿಕೆ : ಸತ್ಯ ಒಪ್ಪಿಕೊಂಡ ನಿತಿನ್ ಗಡ್ಕರಿ

Picture of Savistara

Savistara

Bureau Report

ನವದೆಹಲಿ: ಇ-20 ಪೆಟ್ರೋಲ್‌ನ ಬಳಕೆಯಿಂದಾಗಿ ವಾಹನಗಳಇಂಧನ ದಕ್ಷತೆಯು (ಮೈಲೇಜ್) ಶೇಕಡ 2ರಿಂದ ಶೇ 6ರವರೆಗೆ ಕಡಿಮೆ ಆಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ಗುರುವಾರ ತಿಳಿಸಿದ್ದಾರೆ.

ಇಂಧನ ದಕ್ಷತೆ ತಗ್ಗುವ ಪ್ರಮಾಣವು ವಾಹನವು ಯಾವ ಮಾದರಿಗೆ ಸೇರಿದೆ, ಅದು ಎಷ್ಟು ಹಳೆಯದಾಗಿದೆ ಎಂಬುದನ್ನು ಆಧರಿಸಿದೆ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. ಎಂಜಿನ್‌ನ ಬಾಳಿಕೆಯ ಕುರಿತಾಗಿಯೂ ಪರೀಕ್ಷೆಗಳನ್ನು ನಡೆಸಲಾಗಿದೆ, ಇ-20 ಪೆಟ್ರೋಲ್‌ನಿಂದಾಗಿ ವೈಫಲ್ಯ ಆಗಿರುವುದು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.ಇ-20 ಇಂಧನದಿಂದಾಗಿ ವಾಹನದ ವೇಗೋತ್ಕರ್ಷ ಉತ್ತಮ ಆಗುತ್ತದೆ, ಚಾಲನಾ ಅನುಭವ ಉತ್ತಮವಾಗಿರುತ್ತದೆ, ಇ-10 ಪೆಟ್ರೋಲ್‌ಗೆ ಹೋಲಿಸಿದರೆ ಇದರಲ್ಲಿ ಇಂಗಾಲದ ಡೈ-ಆಡ್ ಉಗುಳುವಿಕೆಯು ಅಂದಾಜು ಶೇ 30ರಷ್ಟು ಕಡಿಮೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!