ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಅಕ್ರಮ ಹೋಮ-ಹವನ’ ದಂಧೆ: ಮನೆಮನೆಗಳಲ್ಲೂ ಯಾಗಶಾಲೆ | ಪೂಜೆ ಹೆಸರಲ್ಲಿ ಭಕ್ತರ ಜೇಬಿಗೆ ಕತ್ತರಿ

Picture of Savistara

Savistara

Bureau Report

ಸುಬ್ರಹ್ಮಣ್ಯ:ರಾಜ್ಯದ ಅತ್ಯಂತ ಪ್ರಸಿದ್ಧ ಹಾಗೂ ಗರಿಷ್ಠ ಆದಾಯ ತರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಕ್ರಮ ಪೂಜಾ ಕೈಂಕರ್ಯಗಳ ದಂಧೆ ದಿನೇ ದಿನೇ ಮಿತಿಮೀರಿದ್ದು, ದೇವಸ್ಥಾನದ ಪವಿತ್ರತೆಗೆ ಧಕ್ಕೆ ತರುವ ಜೊತೆಗೆ ಭಕ್ತಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ.​ಕ್ಷೇತ್ರಕ್ಕೆ ಆಗಮಿಸುವ ಮುಗ್ಧ ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು, ದೇವಸ್ಥಾನದ ಆಸುಪಾಸಿನ ಗಲ್ಲಿ-ಗಲ್ಲಿಗಳಲ್ಲಿ ಅಕ್ರಮ ಹೋಮಕುಂಡಗಳು ಹಾಗೂ ಯಾಗಶಾಲೆಗಳು ಅಣಬೆಗಳಂತೆ ತಲೆಎತ್ತಿವೆ.​

ಸಿಕ್ಕ-ಸಿಕ್ಕ ಜಾಗದಲ್ಲೇ ‘ಅಕ್ರಮ ಯಾಗಶಾಲೆ’​ಸುಬ್ರಹ್ಮಣ್ಯ ಪರಿಸರದ ಖಾಸಗಿ ಮನೆಗಳ ಸಿಟೌಟ್, ಕಾರ್ ಸೆಡ್, ಪಂಪ್ ಸೆಡ್‌ಗಳು ಹಾಗೂ ಮಹಡಿಗಳ ಮೇಲಷ್ಟೇ ಅಲ್ಲದೆ, ಸಿಕ್ಕಸಿಕ್ಕ ಜಾಗಗಳಲ್ಲೆಲ್ಲ ನಿಯಮಬಾಹಿರವಾಗಿ ದಿನಕ್ಕೊಂದು ಪೂಜಾ ಮಂಟಪಗಳು ಸೃಷ್ಟಿಯಾಗುತ್ತಿವೆಯಾವುದೇ ಅನುಮತಿಯಿಲ್ಲದೆ ಈ ಅಕ್ರಮ ಹೋಮ-ಹವನಗಳನ್ನು ನಡೆಸಲಾಗುತ್ತಿದೆ. ಪೂಜೆ ಹೆಸರಿನಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಪೀಕುವ ಮೂಲಕ ಸುಲಿಗೆ ಕೋರರ ಜಾಲ ಸಕ್ರಿಯವಾಗಿದೆ ಇದರಿಂದಾಗಿ ದೇವಸ್ಥಾನದ ಪವಿತ್ರತೆಗೆ ದಕ್ಕೆ ಉಂಟಾಗುತ್ತಿದೆ .​ಆಡಳಿತ ಮಂಡಳಿ, ಅಧಿಕಾರಿಗಳ ಮೌನ: ಪ್ರಭಾವಿಗಳ ಕೈವಾಡ?​ಇಷ್ಟೆಲ್ಲಾ ಅಕ್ರಮಗಳು ದೇವಸ್ಥಾನದ ಮೂಗಿನ ತುದಿಯಲ್ಲೇ ನಡೆಯುತ್ತಿದ್ದರೂ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ದು ​ಈ ಇಡೀ ಅಕ್ರಮ ದಂಧೆಯ ಹಿಂದೆ ಕೆಲವು ಪ್ರಭಾವಿ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಕೈವಾಡವಿದೆ ಎಂಬ ಮಾತು ಸಾರ್ವಜನಿಕರ ಮಧ್ಯ ವ್ಯಕ್ತವಾಗುತ್ತಿದೆ ​ದೇವಸ್ಥಾನದ ಪವಿತ್ರತೆಗೆ ಧಕ್ಕೆ ತರುತ್ತಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.​”ಇದು ಕರ್ನಾಟಕದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಕ್ಕೆ ಮಾಡುತ್ತಿರುವ ಅಪಚಾರ. ದೇವಸ್ಥಾನದ ಹೆಸರಿನಲ್ಲಿ ನಡೆಯುತ್ತಿರುವ ಈ ಸುಲಿಗೆ ದಂಧೆಗೆ ತಕ್ಷಣವೇ ಮುಕ್ತಿ ಸಿಗಬೇಕು. ತಾಲೂಕು ಆಡಳಿತ, ಮುಜರಾಯಿ ಇಲಾಖೆ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ತಕ್ಷಣವೇ ಜಾಗೃತರಾಗಿ, ಅಕ್ರಮ ಯಾಗಶಾಲೆಗಳ ಮೇಲೆ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.” ಭಕ್ತಾದಿಗಳು ಹಾಗೂ ಸಾರ್ವಜನಿಕರು​ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ ​ಧಾರ್ಮಿಕ ಕ್ಷೇತ್ರದ ಸೌಹಾರ್ದತೆ, ಪರಂಪರೆ ಮತ್ತು ಪವಿತ್ರತೆಯನ್ನು ಉಳಿಸಲು ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ಈಗಲಾದರೂ ಕಠಿಣ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!