ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ರಸ್ತೆ ಹೊಂಡ – ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಕಷ್ಟ ಪಡುವಂತಾಗಿತ್ತು . ಕೆಲ ದಿನ ಹಿಂದೆ ರಸ್ತೆ ದುರಸ್ತಿಗೆ ಸಂಸದರು ಸೂಚಿಸಿದ್ದರು ಒಂದು ಭಾಗ ಕೆಲಸ ಮಾಡಿ ತೇಪೆ ಹಾಕಿದ್ದರು ಇಂದು ರಸ್ತೆಯ ಗುಂಡಿಯಲ್ಲಿ ಸಾರ್ವಜನಿಕರು,ರಿಕ್ಷಾ ಚಾಲಕರು ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು
ಕುಡಿಯುವ ನೀರಿನ ಪೈಪ್ ಕಾಮಗಾರಿ ಹಿನ್ನಲೆಯಲ್ಲಿ ರಸ್ತೆ ಅಗೆಯಲಾಗಿತ್ತು.ದಿನನಿತ್ಯ ರಿಕ್ಷಾ ಚಾಲಕರು ನಿತ್ಯ ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚಾರಿಸುತ್ತಿದ್ದೂ ತೊಂದರೆಗೆ ಒಳಗಾಗಿದ್ದರು ಅದಲ್ಲದೆ ರಾಷ್ಟ್ರೀಯ ಹೆದ್ದಾರಿಗೆ ಒಳಪಟ್ಟ ರಸ್ತೆಯಾಗಿದೆ. ಸಂಸದ ಕ್ಯಾ ಚೌಟರ ಗಮನಕ್ಕೆ ಈ ವಿಚಾರ ತಿಳಿದ ತಕ್ಷಣ ಅಧಿಕಾರಿಗಳಿಗೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಸೂಚಿಸಿದ್ದು ಸಂಜೆ ವೇಳೆಗೆ ಕೆಲಸ ಪ್ರಾರಂಭಿಸಿದ್ದು ಇದರ ಜೊತೆಗೆ ಗಾಂಧಿನಗರ ಬಳಿ ಗುಂಡಿ ಬಿದ್ದಿದ್ದು ದುರಸ್ಥಿಗೊಳಿಸುವಂತೆ ಸೂಚಿಸಿದ್ದಾರೆ


















































