ಬೆಳಗಾವಿ: ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ

Picture of Savistara

Savistara

Bureau Report

ಬೆಳಗಾವಿ: ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಪುತ್ರ ಯುಪಿಎಸ್​ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ ಗ್ರಾಮದ ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ದಂಪತಿಗಳ ತೃತಿಯ ಸುಪುತ್ರ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಬೀರಪ್ಪ ಸಿದ್ದಪ್ಪ ಡೋಣಿ ಕುರಿ ಕಾಯುತ್ತಿರುವಾಗಲೇ ಯುಪಿಎಸ್ಸಿ ಫಲಿತಾಂಶ ಬಂದಿದ್ದು, ತಾನು ಪಾಸಾದ ಸುದ್ದಿ ತಿಳಿದು ಕುಣಿದು ಕುಪ್ಪಳಿಸಿದ್ದಾರೆ. ಯುವಕ ಬೀರಪ್ಪ ಕುರಿ ಕಾಯುತ್ತಾ ಯುಪಿಎಸ್​ಸಿಗೆ ತಯಾರಿ ನಡೆಸಿದ್ದರು. ಬೀರಪ್ಪ ಅವರ ಸಾಧನೆಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ಯುವಕ ಬೀರಪ್ಪ ಸದ್ಯ ಬೆಳಗಾವಿ ತಾಲೂಕಿನ ನಾನಾವಾಡಿಯಲ್ಲಿದ್ದು, ಗದ್ದೆಯೊಂದರಲ್ಲಿ ಕುರಿ ಮೇಯಿಸುತ್ತಿದ್ದಾರೆ. ಬೀರಪ್ಪ ಅವರ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಕುಟುಂಬಸ್ಥರು ಬೀರಪ್ಪ ಅವರಿಗೆ ಆರತಿ ಎತ್ತಿ ಹಾರ ಹಾಕಿ ಕೈಗೆ ಕುರಿ ಮರಿ ಕೊಟ್ಟು ಸ್ಮಾನಿಸಿದರು. ಬೀರಪ್ಪ ಅವರು ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!