ಸುಲಿಗೆಕೋರರ ಜಾಲಕ್ಕೆ ‘ಸವಿಸ್ತಾರ’ ವರದಿ ಬಿಸಿ: ಕೊನೆಗೂ ಎಚ್ಚೆತ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ

Picture of Savistara

Savistara

Bureau Report

ಮನೆ-ಮನೆಗಳಲ್ಲಿ ಅಕ್ರಮ ಯಾಗಶಾಲೆಗಳ ದಂಧೆ ಬಯಲು ಮಾಡಿದ ‘ಸವಿಸ್ತಾರ ಕನ್ನಡ ನ್ಯೂಸ್’ ಈ ಬಗ್ಗೆ ​ಭಕ್ತರಿಗೆ ಜಾಗೃತಿ ಮೂಡಿಸಲು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.ದೇವಸ್ಥಾನದ ಆಡಳಿತ ಮಂಡಳಿ​ಖಾಸಗಿ ಸ್ಥಳಗಳಲ್ಲಿ ಪೂಜೆ ಮಾಡಿಸಿದರೆ ‘ದೋಷ ಪರಿಹಾರವಾಗಲ್ಲ’ – ಮಧ್ಯವರ್ತಿಗಳ ನಂಬಿ ಮೋಸ ಹೋಗದಂತೆ ದೇವಸ್ಥಾನದಿಂದ ವಿನಂತಿ​ ಸಾರ್ವಜನಿಕರ ಮೆಚ್ಚುಗೆ: ಬರಿ ಪ್ರಕಟಣೆಯಷ್ಟೇ ಸಾಲದು, ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಭಕ್ತರ ಬಿಗಿಯಾದ ಆಗ್ರಹ.​ ಸುಬ್ರಹ್ಮಣ್ಯ:​ಕರ್ನಾಟಕದ ಅತ್ಯಂತ ಪವಿತ್ರ ಹಾಗೂ ಗರಿಷ್ಠ ಆದಾಯ ತರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನಲ್ಲಿ ಕದ್ದುಮುಚ್ಚಿ ನಡೆಯುತ್ತಿದ್ದ ಬೃಹತ್ ‘ಅಕ್ರಮ ಹೋಮ-ಹವನ’ ಹಾಗೂ ಸುಲಿಗೆ ದಂಧೆಯ ಕುರಿತು ‘ಸವಿಸ್ತಾರ ನ್ಯೂಸ್’ ವರದಿಯ ವಿಚಾರವಾಗಿ ಕೊನೆಗೂ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎಚ್ಚೆತ್ತುಕೊಂಡಿದ್ದು, ಭಕ್ತಾದಿಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.​ವರದಿಯ ಹಿನ್ನೆಲೆ: ಮನೆ-ಮನೆಯಲ್ಲೂ ‘ಅಕ್ರಮ ಯಾಗಶಾಲೆ’​ಕ್ಷೇತ್ರಕ್ಕೆ ಆಗಮಿಸುವ ಮುಗ್ಧ ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು ದೇವಸ್ಥಾನದ ಆಸುಪಾಸಿನ ಖಾಸಗಿ ಮನೆಗಳ ಸಿಟೌಟ್‌ಗಳು, ಕಾರ್‌ಶೆಡ್‌ಗಳು, ಪಂಪ್‌ಶೆಡ್‌ಗಳು ಹಾಗೂ ಕಟ್ಟಡಗಳ ಮಹಡಿಗಳ ಮೇಲೆ ಯಾವುದೇ ಅನುಮತಿ ಇಲ್ಲದೆ ದಿನಕ್ಕೊಂದು ‘ಅಕ್ರಮ ಯಾಗಶಾಲೆ’ಗಳು ಅಣಬೆಗಳಂತೆ ತಲೆಎತ್ತಿದ್ದವು. ಧಾರ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಭಕ್ತರಿಂದ ಲಕ್ಷಾಂತರ ರೂಪಾಯಿ ಪೀಕುತ್ತಿದ್ದ ಸುಲಿಗೆಕೋರರ ಜಾಲ ಸಕ್ರಿಯವಾಗಿದ್ದು, ಧಾರ್ಮಿಕ ಕ್ಷೇತ್ರದ ಪವಿತ್ರತೆಗೆ ಧಕ್ಕೆ ತರುತ್ತಿತ್ತು. ಈ ಸಂಪೂರ್ಣ ಕರಾಳ ದಂಧೆಯನ್ನು ಸಾರ್ವಜನಿಕರ ಹಾಗೂ ಆಡಳಿತದ ಗಮನಕ್ಕೆ ತಂದಿತ್ತು.​ದೇವಸ್ಥಾನ ಆಡಳಿತ ಮಂಡಳಿಯಿಂದ ಅಧಿಕೃತ ಪ್ರಕಟಣೆ: ಏನಿದೆ ಸ್ಪಷ್ಟನೆ?​’ಸವಿಸ್ತಾರ ನ್ಯೂಸ್’ ವರದಿಯ ಪರಿಣಾಮವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದy ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು/ಸದಸ್ಯರು ಜಂಟಿಯಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.​ದೇವಸ್ಥಾನದ ಪ್ರಕಟಣೆಯ ಮುಖ್ಯ ಅಂಶಗಳು:​ದೇವಸ್ಥಾನದಲ್ಲೇ ಪೂಜೆ ಕಡ್ಡಾಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಇತ್ಯಾದಿ ಸೇವೆಗಳನ್ನು ಶ್ರೀ ದೇವಳದಲ್ಲಿಯೇ ನೆರವೇರಿಸಿದರೆ ಮಾತ್ರ ಪೂರ್ಣ ಫಲ ಸಿಗುತ್ತದೆ.​ಖಾಸಗಿ ಪೂಜೆಯಿಂದ ಫಲವಿಲ್ಲ: ಮಧ್ಯವರ್ತಿಗಳ ಮೂಲಕ ಖಾಸಗಿ ವಸತಿಗೃಹಗಳಲ್ಲಿ, ಮಠ ಮಂದಿರಗಳಲ್ಲಿ, ಪುರೋಹಿತರ ಮನೆಗಳಲ್ಲಿ ಅಥವಾ ಇತರ ಯಾವುದೇ ಖಾಸಗಿ ಸ್ಥಳಗಳಲ್ಲಿ ಈ ಸೇವೆಗಳನ್ನು ನೆರವೇರಿಸಿದರೆ ದೋಷ ಪರಿಹಾರವಾಗುವುದಿಲ್ಲ ಹಾಗೂ ಯಾವುದೇ ಫಲ ದೊರಕುವುದಿಲ್ಲ.​ಯಾವುದೇ ಮಧ್ಯವರ್ತಿಗಳಿಲ್ಲ (Agents)ನಾಗ ದೋಷ ಸಂಬಂಧಿತ ಸೇವೆಗಳನ್ನು ನೆರವೇರಿಸಲು ದೇವಸ್ಥಾನದ ವತಿಯಿಂದ ಯಾವುದೇ ಮಧ್ಯವರ್ತಿಗಳನ್ನು (ಏಜೆಂಟ್) ನೇಮಕ ಮಾಡಿಲ್ಲ.​ಆನ್‌ಲೈನ್ ಬುಕಿಂಗ್ ವ್ಯವಸ್ಥೆ: ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳಾದ [https://itms.kar.nic.in](https://itms.kar.nic.in) / [https://karnataka.temples.gov.in](https://karnataka.temples.gov.in) ಮೂಲಕ ಆನ್‌ಲೈನ್‌ನಲ್ಲಿ ಮುಂಗಡವಾಗಿ ಸೇವೆಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.​ಹೆಚ್ಚಿನ ಹಣ ನೀಡಿ ಮೋಸ ಹೋಗಬೇಡಿ: ದೇವಸ್ಥಾನದ ಹೊರತುಪಡಿಸಿ ಖಾಸಗಿ ಸ್ಥಳಗಳಲ್ಲಿ ದೇವಳದ ಸೇವೆಗಳ ಹೆಸರಿನಲ್ಲಿ ಮಧ್ಯವರ್ತಿಗಳಿಗೆ ದುಪ್ಪಟ್ಟು ಹಣ ನೀಡಿ ಮೋಸ ಹೋಗದಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.​ಸಾರ್ವಜನಿಕರ ಆಗ್ರಹ: ‘ಬರಿ ಮನವಿ ಸಾಲದು, ಅಕ್ರಮ ನಡೆಸುವವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ!​’ಸವಿಸ್ತಾರ ಕರ್ನಾಟಕ ನ್ಯೂಸ್’ ವರದಿಯಿಂದಾಗಿ ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿ ಭಕ್ತರಲ್ಲಿ ಜಾಗೃತಿ ಮೂಡಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಸಾರ್ವಜನಿಕರು ಹಾಗೂ ಭಕ್ತಾದಿಗಳು ಇಷ್ಟಕ್ಕೇ ತೃಪ್ತರಾಗಿಲ್ಲ.​ಸಾರ್ವಜನಿಕರ ಪ್ರಮುಖ ಆಗ್ರಹಗಳು:​ದಾಳಿ ಮತ್ತು ಅಕ್ರಮ ಯಾಗಶಾಲೆಗಳ ತೆರವು: ಕೇವಲ ಪತ್ರಿಕಾ ಪ್ರಕಟಣೆ ನೀಡಿ ಕೈತೊಳೆದುಕೊಳ್ಳದೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ಸಹಯೋಗದೊಂದಿಗೆ ಅಕ್ರಮವಾಗಿ ನಡೆಸಿರುವ ಯಾಗಶಾಲೆಗಳು ಹಾಗೂ ಹೋಮಕುಂಡಗಳ ಮೇಲೆ ತಕ್ಷಣವೇ ದಾಳಿ ನಡೆಸಬೇಕು.​ದಂಧೆಕೋರರ ಬಂಧನ: ಭಕ್ತರನ್ನು ವಂಚಿಸುತ್ತಿರುವ ಮಧ್ಯವರ್ತಿಗಳು, ಅಕ್ರಮ ಹೋಮ ನಡೆಸುವ ಪುರೋಹಿತರು ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಪ್ರಭಾವಿಗಳ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು.​ಧಾರ್ಮಿಕ ಪವಿತ್ರತೆಯ ರಕ್ಷಣೆ: ಕರ್ನಾಟಕದ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರದ ಸೌಹಾರ್ದತೆ, ಪರಂಪರೆ ಮತ್ತು ಪವಿತ್ರತೆಯನ್ನು ಕಾಪಾಡಲು ಶಾಶ್ವತವಾಗಿ ಇಂತಹ ಅಕ್ರಮ ದಂಧೆಗಳಿಗೆ ಮುಕ್ತಿ ಹಾಡಬೇಕೆಂಬುದು ಭಕ್ತರ ಅಗ್ರಹ

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!