ಮುಖ್ಯಮಂತ್ರಿ ಡಿಕೆಗೆ ವರುಣನ ಅಭಯ | ಕಾವೇರಿ ಬಿಕ್ಕಟ್ಟು ಸದ್ಯಕ್ಕೆ ಪಾರು | ಮಳೆಯಿಂದ ಡ್ಯಾಮ್ ಒಳಹರಿವು ಹೆಚ್ಚಳ

Picture of Savistara

Savistara

Bureau Report

ಎಚ್.ಡಿ.ಕೋಟೆ/ ಮಡಿಕೇರಿ ಬರಗಾಲದ ನಡುವೆಯೂ ತಮಿಳುನಾಡಿಗೆ 15 ದಿನ ನಿತ್ಯ 3500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನದಿ ನಿಯಂತ್ರಣಾ ಸಮಿತಿ ಮತ್ತು ಕಾವೇರಿ ನದಿ ನಿರ್ವಹಣಾ ಮಂಡಳಿ ಆದೇಶದಿಂ ದಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಸರ್ಕಾರಕ್ಕೆ ಕಡೆ ಫಳಿಗೆಯಲ್ಲಿ ವರುಣನ ಕೃಪೆಯಾ ಗಿದೆ. ಕೇರಳದ ವಯನಾಡು ಮತ್ತು ಕರ್ನಾಟಕದ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯ ಪರಿಣಾಮಕಬಿನಿಮತ್ತು ಹಾರಂಗಿ ಆಣೆಕಟ್ಟುಗಳು ತುಂಬಿದ್ದು, ತಮಿಳುನಾಡಿಗೆ ಸೂಚಿಸಿದ್ದಕ್ಕಿಂತಲೂ ಹೆಚ್ಚಿನ ನೀರು ಹರಿವು ಆರಂಭವಾಗಿದೆ.ಹೀಗಾಗಿ ನೀರು ಬಿಟ್ಟರೆ ಕರ್ನಾಟಕದ ರೈತರ ಆಕ್ರೋಶ, ಬಿಡದೇ ಇದ್ದರೆ ನ್ಯಾಯಾಲಯದ ಛೀಮಾರಿಗೆ ಗುರಿಯಾಗಬೇಕಿದ್ದ ಸಂಕಷ್ಟದಿಂದ ಸದ್ಯಕ್ಕೆ ಕರ್ನಾಟಕ ಸರಕಾರ ಪಾರಾಗಿದೆ.

ನದಿಗೆ ಇಳಿದರೆ ಕೊಚ್ಚಿ ಹೋಗ್ತಿರಿ: ಸಿಎಂ ಎಚ್ಚರಿಕೆ

ಮೈಸೂರು: ಕಬಿನಿ ಜಲಾಶಯ ತುಂಬು ತ್ತಿದೆ. ಹೆಚ್ಚಿನ ಪ್ರಮಾಣದ ನೀರು ಹೊರಗೆ ಬಿಡಲೇಬೇಕು. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ನೀರು ಬಿಡುವುದಿಲ್ಲ ಅಂತಾ ಯಾವುದೇ ಹೋರಾಟಗಾರರು ನದಿಗೆ ಇಳಿಯಬೇಡಿ. ಆ ರೀತಿ ಇಳಿದರೆ ಕೊಚ್ಚಿಕೊಂಡು ಹೋಗುತ್ತೀರಿ ಎಂದು ಸಿಎಂ ಡಿ.ಕೆ.ಶಿವಕುಮಾ‌ರ್ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಕುರಿತು ಚರ್ಚೆಗೆ ಇಂದು ಸರ್ವ ಪಕ ಸಭೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿಪಕ್ಷಗಳ ನಾಯಕರ ಅಭಿಪ್ರಾಯ ಪಡೆದು, ಮುಂದಿನ ಕ್ರಮ ನಿರ್ಧರಿಸಲು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.

ರಾಜ್ಯದ ಹಲವು ಕಡೆ ಭಾರೀ ಮಳೆ: ಡ್ಯಾಂಗಳಿಗೆ ನೀರು

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟದವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳಿಗೆ ಜೀವ ಕಳೆ ಬಂದಿದೆ. ತುಂಗಾ, ಭದ್ರಾ, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಕೆಲವೆಡೆ ಗುಡ್ಡ ಕುಸಿದು, ಮನೆಗಳಿಗೆ ಹಾನಿ ಆಗಿದೆ. ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ

[t4b-ticker]
error: Content is protected !!