ಮಡಿಕೇರಿ: ಮಡಿಕೇರಿಯಿಂದ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರ ಮದೆ ಗ್ರಾಮದ ಕರ್ತೋಜೆ ಬಳಿ ರಸ್ತೆಯ ಮೇಲೆ ಬಂಡೆ ಕಲ್ಲು ಉರುಳಿ ಬಿದ್ದು ಕೆಲಕಾಲ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ನಂತರ, ಬಂಡೆಗಲ್ಲನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಲಾಯಿತು. ಭಾರಿ ಮಳೆ ಮುಂದುವರಿದಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ಆತಂಕವನ್ನು ತೊಂದೊಡ್ಡಿದೆ.









































