ನವದೆಹಲಿ: ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹಳಸಿದ್ದು, ಎರಡೂ ಕಡೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ಯಾವುದೇ ಸಂದರ್ಭವನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನಧವಾಗುತ್ತಿದ್ದು ಒಂದು ರೀತಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ ಅನ್ನಬಹುದು. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ದೇಶದ ಜನರಿಂದ ಹಣ ಲೂಟಿ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಸೇನೆಯನ್ನು ಬಲಿಷ್ಠಗೊಳಿಸು ಕೇಂದ್ರ ಸರ್ಕಾರ ದೇಣಿಗೆ ಕೇಳಿದೆ ಎಂಬ ದಾರಿತಪ್ಪಿಸುವ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಚಿವ ಸಂಪುಟದಲ್ಲಿ ಈ ನಿರ್ಧಾರ ಆಗಿದ್ದು ಜನರು ಸರ್ಕಾರದ ಖಾತೆಗೆ ಹಣ ಹಾಕುವಂತೆ ಸಂದೇಶ ಹರಿಬಿಟ್ಟಿದ್ದಾರೆ. ಆದ್ರೆ ಇದೊಂದು ನಕಲಿ ಬ್ಯಾಂಕ್ ಖಾತೆಯಾಗಿದ್ದು, ಸರ್ಕಾರ ಅಂತಹ ಯಾವುದೇ ದೇಣಿಗೆಯನ್ನು ದೇಶದ ಜನರಿಂದ ಕೇಳಿಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.ದೇಶದ ಜನರು ಜಾಗರೂಕರಾಗಿ ಇಂತಹ ಮೋಸದ ಸಂದೇಶಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೈನಿಕರಿಗಾಗಿ ಕೇಂದ್ರ ಸರ್ಕಾರ ಹಲವಾರು ಕಲ್ಯಾಣ ಯೋಜನೆ ಪ್ರಾರಂಭಿಸಿದೆ ಎಂದು ಸಚಿವಾಲಯ ಹೇಳಿದೆ.











































