ಪಂಜ ಗ್ರಾ.ಪಂ. ಸಿಬ್ಬಂದಿಯಿಂದ ಅವ್ಯವಹಾರ: ಸಮಗ್ರ ತನಿಖೆಗೆ ಆಡಳಿತ ಮಂಡಳಿ ಆಗ್ರಹ-ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ

Picture of Savistara

Savistara

Bureau Report

ಪಂಜ ಗ್ರಾಮ ಪಂಚಾಯತ್ ನಲ್ಲಿ ಸಿಬ್ಬಂದಿಯಿಂದ ನಡೆದ ಅವ್ಯವಹಾರದ ಸಮಗ್ರ ತನಿಖೆಯಾಗಬೇಕು ಎಂದು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ನಡೆಸಿ ಆಡಳಿತ ಮಂಡಳ ಮೇಲೆ ಹೊರಿಸಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.ಡಿ.22ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಂಜ ಗ್ರಾ.ಪಂ. ಆಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷನಾರಾಯಣ ಕೃಷ್ಣನಗರ, ಸದಸ್ಯರುಗಳಾದ ಶರತ್ ಕುದ್ದು ಚಂದ್ರಶೇಖರ ದೇರಾಜೆ ತೋಟ, ಪೂರ್ಣಿಮಾ ದೇರಾಜೆ, ನೇತ್ರಾವತಿ ಕಲ್ಲಾಜೆ, ಜಗದೀಶ್ ಪುರಿಯ, ವೀಣಾ ಪಂಜ, ಪ್ರಮೀಳಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷನಾರಾಯಣ ಕೃಷ್ಣನಗರ ”ಗ್ರಾಮ ಪಂಚಾಯತ್‌ನಲ್ಲಿ ಸಿಬ್ಬಂದಿಯಿಂದ 13 ಲಕ್ಷದ 94 ಸಾವಿರ ರೂ. ಹಣ ದುರುಪಯೋಗ ಆಗಿರುವ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ ನಾವು ಸಿಬ್ಬಂದಿ ಬಾಬುರನ್ನು ಕರೆದು ವಿಚಾರಿಸಿದ್ದೇವೆ. ನಾನು ಹಣ ಬ್ಯಾಂಕ್‌ಗೆ ಪಾವತಿ ಮಾಡದೇ ಇರುವುದು ಹೌದು. ನಾನು ಪಾವತಿಸುತ್ತೇನೆ ಆದರೆ ನನಗೆ ಕಾಲಾವಕಾಶ ಬೇಕು ಎಂದು ಆ ಸಿಬ್ಬಂದಿ ಕೇಳಿದರು. ನಾವು ಆಡಳಿತ ಮಂಡಳಿ ತುರ್ತು ಸಭೆ ಸೇರಿ ಚರ್ಚಿಸಿ ದೊಡ್ಡ ಮೊತ್ತದ ಹಣ ದುರುಪಯೋಗ ಆಗಿರುವುದರಿಂದ ಸಿಬ್ಬಂದಿಯನ್ನು ಅಮಾನತು ಮಾಡಲು ಸಭೆ

ನಿರ್ಧರಿಸಿದೆವು. ಅದರಂತೆ ನಿಯಮದ ಪ್ರಕಾರ ಅಮಾನತು ಮಾಡಲಾಗಿದೆ. ಬಳಿಕ ಪೋಲೀಸ್ ದೂರು ಕೂಡಾ ನೀಡಲಾಗಿದೆ. ಸಮಗ್ರ ತನಿಖೆ ನಡೆಸುವಂತೆಯೂ ತಾ.ಪಂ. ಇ.ಒ. ರವರಿಗೆ ಕೇಳಿಕೊಳ್ಳಲಾಗಿದೆ ಎಂದು ವಿವರ ನೀಡಿದರು.ಆರೋಪ ಸತ್ಯಕ್ಕೆ ದೂರಹಣ ದುರುಪಯೋಗ ಆಗಿರುವು ದರಿಂದ ಸಿಬ್ಬಂದಿಯನ್ನು ರಕ್ಷಿಸದೇ ನಾವು ಕ್ರಮಕೈಗೊಂಡಿದ್ದೇವೆ. ಆದರೆ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸಿ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಗ್ರಾಮದ ಜನರು ಎಲ್ಲವನ್ನು ನೋಡುತಿದ್ದು ಅವರಿಗೆ ಸತ್ಯ ಗೊತ್ತಾಗುತ್ತದೆ ಎಂದು ನಾರಾಯಣರು ಹೇಳಿದರು.

ಪ್ರತಿಭಟನೆಯ ಭಾಷಣದಲ್ಲಿ ಬಾಬು ಅಮಾಯಕ ಎಂದು ಕಾಂಗ್ರೆಸ್‌ನ ಆನಂದ ಬೆಳ್ಳಾರೆ ಹೇಳುತ್ತಾರೆ. ಇವರೇನು ತನಿಖಾಧಿಕಾರಿಯಾ! ಬಾಬು ಹೇಳಿದ್ದನ್ನೇ ಇವರು ನಂಬುವುದಾದರೆ ತನಿಖೆ ನಡೆದು ಆರೋಪ ಸಾಬೀತಾದರೆ ಸಿಬ್ಬಂದಿ ಬಾಬು ನಡೆಸಿದ ಅವ್ಯವಹಾರದ ಪೂರ್ತಿ ಹಣವನ್ನು ಇವರು ಕಟ್ಟುತ್ತಾರಾ? ಎನ್ನುವುದನ್ನು ಲಿಖಿತವಾಗಿ ಹೇಳಲಿ ಎಂದು ಸವಾಲು ಎಸೆದಳು.

ನನ್ನ ಬಗ್ಗೆ ಕಲ್ಲಡ್ಕ ಗ್ರಾ.ಪಂ. ಅಧ್ಯಕ್ಷರು ಮಾತನಾಡಿದ್ದಾರೆ. ನಾನು ಯಾರಿಗೂ ತೊಂದರೆ ನೀಡದೇ ಮೇಲೆ ಬಂದವನು. ತಲೆ ಒಡೆಯುವ ಅಕ್ರಮ ಕೆಲಸಗಳನ್ನು ಮಾಡಿ ಈ ಸ್ಥಾನಕ್ಕೆ ಬಂದಿಲ್ಲ, ಅವರು ಹೇಗೆ ಬಂದರು ಎಂದು ಆತ್ಮವಲೋಕನ ಮಾಡಿಕೊಳ್ಳಲಿ. ಕಡ ವ್ಯಾಪ್ತಿಯಲ್ಲಿ ರಸ್ತೆಗೆ ತಾಗಿಕೊಂಡು ಎಷ್ಟು ಕಟ್ಟಡ

ಇದೆ. ಅಲ್ಲಿಯ ವ್ಯವಸ್ಥೆಯನ್ನು ಸರಿಪಡಿಸಲು ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷರಿಂದ ಆಗಿಲ್ಲ. ಅದೆಲ್ಲ ಅವರ ಗಮನಕ್ಕೆ ಬಂದಿಲ್ಲ ಯಾಕೆ ಎಂದು ನಾರಾಯಣರು ಪ್ರಶ್ನಿಸಿದರು. ಪಂಜದಲ್ಲಿ ಅವ್ಯವಹಾರ ನಡೆದಿದೆ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ ನಾಯಕರು ಕಬ್ಬಡ್ಡ ಮತ್ತು ಪಂಬೆತ್ತಾಡಿ ಗ್ರಾಮಗಳಲ್ಲಿ ನಡೆಯುವ ಮರಕಳ್ಳತನ ಇನ್ನಿತರ ದಂಧೆ ಅವರ ಗಮನಕ್ಕೆ ಬರುತ್ತಿಲ್ಲವೇ?ಧಾರ್ಮಿಕ ಪರಿಷತ್‌ ಸದಸ್ಯರೊಬ್ಬರು ವೇದಿಕೆಯ ಮೇಲೆ ಪರಿಶುದ್ಧತೆಯ ಮಾತನಾಡುತ್ತಾರೆ. ಅವರು ಹಲವರಿಗೆ ಹಣ ಹಿಡಿಸಿಲ್ಲವೇ?, ಅವರು ನೀಡಿದ ಚೆಕ್ ಬೌನ್ಸ್ ಆಗಿಲ್ಲದೇ ? ಎಂದು ಪ್ರಶ್ನಿಸಿದ ಅವರು, ಲೋಕಾಯುಕ್ತ ತನಿಖೆಗೆ ಒತ್ತಾಯಿಸುವುದಾದರೆ ಪಂಜ ಹಾಗೂ ಕಲ್ಲಡ್ಕ ಎರಡೂ ಗ್ರಾ.ಪಂ. ಗಳ ಮೇಲು ತನಿಖೆಯಾಗಲಿ, ಸತ್ಯಾಸತ್ಯತೆ ಹೊರ ಬರಲಿ ಎಂದು ಹೇಳಿದರು.ಪ್ರಮಾಣ ಮಾಡಲಿನಾವು ಬಾಬುರವರಿಗೆ ಬೆದರಿಕೆ ಹಾಕಿಲ್ಲ. ಹಾಗಿದ್ದರೆ ಆರೋಪ ಮಾಡು ವವರು ಸತ್ಯ ಜಾಗದಲ್ಲಿ ಬಂದು ಪ್ರಮಾಣ ಮಾಡಲಿ. ನಾವು ಬರುತ್ತೇವೆ. ಆನಂದ ಬೆಳ್ಳಾರೆಯವರು ಆರೋಪಿತನ ಪರ ನಿಂತು ತನಿಖೆಯ ದಾರಿ ತಪ್ಪಿಸುತ್ತಿರುವುದು ಇದರಿಂದ ಗೊತ್ತಾಗುತ್ತಿದೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಉಪಾಧ್ಯಕ್ಷ ನಾರಾಯಣ ಹೇಳಿದರು.

[t4b-ticker]
error: Content is protected !!