ಹಿಂದೂ ಸಮುದಾಯಕ್ಕೆ ಅವಮಾನ-ನೇಪಾಳದಲ್ಲಿ ಭುಗಿಲೆದ್ದ ಗಲಭೆ, ಮಸೀದಿ ಧ್ವಂಸ

Picture of Savistara

Savistara

Bureau Report

ಕಾಡ್ಕಂಡು: ಭಾರತದ ಗಡಿಯಲ್ಲಿರುವ ನೇಪಾಳದ ಕೆಲವು ಭಾಗಗಳಲ್ಲಿ ಕೋಮುಉದ್ವಿಗ್ನತೆ ಉಂಟಾಗಿದ್ದು, ಹೆಚ್ಚಿನ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ. ಧಾರ್ಮಿಕ ವಿಚಾರದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನೇಪಾಳದ ಪರ್ಸಾ ಜಿಲ್ಲೆಯ ಬಿರ್ಗುಂಜ್ ಪಟ್ಟಣದಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದಾಗಿ ವರದಿ ವಿವರಿಸಿದೆ.ಪಾರ್ಸಾ ಜಿಲ್ಲಾಡಳಿತವು ಬಿಹಾರದ ರಕ್ಷೌಲ್ ಜಿಲ್ಲೆಯ ಬಿರ್ಗುಂಜ್ ನಗರದಲ್ಲಿ ಕರ್ಪ್ಯೂ ಜಾರಿಗೊಳಿಸಿದೆ. ನೇಪಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಗಡಿ ಭಾಗದಲ್ಲಿನ ಎಲ್ಲಾ ಸಂಚಾರ, ಸಾಗಾಟವನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.

ನೇಪಾಳದಲ್ಲಿ ಗಲಭೆಗೆ ಕಾರಣವೇನು?

ಧನುಷಾ ಜಿಲ್ಲೆಯ ಕಮಲಾ ಪುರಸಭೆಯ ಹೈದರ್ ಅನ್ಸಾರಿ ಮತ್ತು ಅಮಾನತ್ ಅನ್ಸಾರಿ ಎಂದು ಗುರುತಿಸಲಾದ ಇಬ್ಬರು ಮುಸ್ಲಿಂ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಸಮುದಾಯವನ್ನು ಅವಮಾನಿಸುವ ಹೇಳಿಕೆಗಳನ್ನು ಒಳಗೊಂಡ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ನೇಪಾಳದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಇಬ್ಬರನ್ನೂ ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಈ ವಿಡಿಯೋ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹದ್ದಾಗಿದೆ ಎಂದು ಆರೋಪಿಸಿದ್ದರು.ಈ ಉದ್ವಿಗ್ನತೆ ನಡುವೆಯೇ ಕಮಲಾದ ಸಖುವಾ ಮಾರನ್ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿರುವ ಘಟನೆ ದೊಡ್ಡ ಗಲಭೆಗೆ ಎಡೆಮಾಡಿಕೊಟ್ಟಿರುವುದಾಗಿ ನೇಪಾಳದ ಮಾಧ್ಯಮಗಳು ವರದಿ ಮಾಡಿವೆ.

ವೈರಲ್ ವಿಡಿಯೋದ ವಿರುದ್ಧ ಬೀದಿಗಿಳಿದಿದ್ದ ಹಿಂದೂ ಸಮುದಾಯ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಸ್ಥಳೀಯ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ವರದಿ ತಿಳಿಸಿದೆ.ಪರಿಸ್ಥಿತಿಯನ್ನು ನಿಯಂತ್ರಿಸಲು ನಿಟ್ಟಿನಲ್ಲಿ ಬಿರ್ಗುಂಜ್ ಪ್ರದೇಶದಲ್ಲಿ ಕರ್ಪೂ ಜಾರಿಗೊಳಿಸಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ ಎಂದು ನೇಪಾಳ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

[t4b-ticker]
error: Content is protected !!