ಜೂನ್ 1 ರಿಂದ ಘಾಟ್ ಸೆಕ್ಷ​ನಲ್ಲಿ ವಂದೇ ಭಾರತ್ ಟ್ರಯಲ್ ರನ್: ಬೆಂಗಳೂರು – ಸುಬ್ರಹ್ಮಣ್ಯ ಪ್ರಯಾಣಕ್ಕಿನ್ನು ನಾಲ್ಕೈದು ಗಂಟೆ ಸಾಕು!

Picture of Savistara

Savistara

Bureau Report

ಮಂಗಳೂರು, ಮೇ 30: ಕರಾವಳಿ ಕರ್ನಾಟಕ (Coastal Karnataka) ಮತ್ತು ರಾಜಧಾನಿ ಬೆಂಗಳೂರು (Bengaluru) ನಡುವೆ ಕೊನೆಗೂ ‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (Bengaluru–Mangaluru Vande Bharat Express)’ ಸಂಚಾರಕ್ಕೆ ಮುಹೂರ್ತ ಕೂಡಿಬಂದಿದೆ. ಜೂನ್​ನಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದ್ದು, ಅದರ ಪೂರ್ವಭಾವಿಯಾಗಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣವಾದ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಜೂನ್ 1 ರಿಂದ ಆರಂಭವಾಗಲಿದೆ. ಸದ್ಯ ಈ ಭಾಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅಂತಿಮ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗುವ ಹಂತಕ್ಕೆ ತಲುಪಿವೆ. ರೈಲ್ವೆ ಸಚಿವಾಲಯದ ಗುಣಮಟ್ಟ ಮತ್ತು ಮಾನದಂಡಗಳ ವಿಭಾಗವಾದ ಆರ್‌ಡಿಎಸ್‌ಒ (RDSO) ಉನ್ನತ ಮಟ್ಟದ ತಂಡವು ಜೂನ್ 1 ರಿಂದ ಈ ಘಾಟ್ ಪ್ರದೇಶದಲ್ಲಿ ಸುಧಾರಿತ ಪ್ರಾಯೋಗಿಕ ಸಂಚಾರವನ್ನು (Trial Runs) ಆರಂಭಿಸಲಿದೆ.

ಮುಖ್ಯಾಂಶಗಳು

  • ಜೂನ್ 1 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್‌ನಲ್ಲಿ ವಂದೇ ಭಾರತ್ ರೈಲು ಸಂಚಾರದ ಸುರಕ್ಷತಾ ಹೈ-ಲೆವೆಲ್ ಟ್ರಯಲ್ ರನ್.
  • ದುರ್ಗಮ ತಿರುವುಗಳು ಹಾಗೂ 57 ಸುರಂಗಗಳನ್ನು ಹೊಂದಿರುವ 55 ಕಿಮೀ ಕಠಿಣ ಘಾಟ್ ಮಾರ್ಗ.
  • ಜೂನ್​ನಲ್ಲೇ ರೈಲು ಸಂಚಾರ ಶುರು ಮಾಡುವ ಭರವಸೆ ನೀಡಿದ್ದ ಸಚಿವರು.

ಸೋಮಣ್ಣ ಭರವಸೆಯಂತೆ ಜೂನ್‌ನಲ್ಲೇ ರೈಲು ಓಡಾಟ

ಇತ್ತೀಚೆಗೆ ಮೇ 23 ರಂದು ಮಂಗಳೂರಿಗೆ ಭೇಟಿ ನೀಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜೂನ್ ತಿಂಗಳಿನಲ್ಲಿಯೇ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಡಿಆರ್‌ಎಂ (DRM) ಮುದಿತ್ ಮಿತ್ತಲ್ ನೀಡಿರುವ ಮಾಹಿತಿ ಪ್ರಕಾರ, ಜೂನ್ 1 ರಿಂದ ಆರಂಭವಾಗಲಿರುವ ಈ ಟೆಸ್ಟಿಂಗ್ ಪ್ರಕ್ರಿಯೆಯು ಸುಮಾರು ಒಂದು ವಾರಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ಇಂಜಿನ್ ಮೂಲಕ ಖಾಲಿ ಪ್ಯಾಸೆಂಜರ್ ರೇಕ್ ಬಳಸಿ ನಡೆಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.ಭಾರತದ ಅತ್ಯಂತ ಸವಾಲಿನ ರೈಲ್ವೆ ಮಾರ್ಗಹಾಸನ-ಮಂಗಳೂರು ಲೈನ್‌ನಲ್ಲಿ ಬರುವ 55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಅತ್ಯಂತ ಕಡಿದಾದ ಮಾರ್ಗವಾಗಿದ್ದು, ಭಾರತದಲ್ಲೇ ಅತ್ಯಂತ ಕಠಿಣ ತಾಂತ್ರಿಕ ಸವಾಲುಗಳನ್ನು ಹೊಂದಿರುವ ರೈಲ್ವೆ ಸೆಕ್ಷನ್ ಎಂದು ಗುರುತಿಸಲ್ಪಟ್ಟಿದೆ. ಭೂಕುಸಿತದ ಭೀತಿಯ ನಡುವೆಯೂ 57 ಸುರಂಗಗಳು (Tunnels), 258 ಸೇತುವೆಗಳು ಮತ್ತು 108 ಕಡಿದಾದ ತಿರುವುಗಳನ್ನು ಹೊಂದಿರುವ ಈ ಮಾರ್ಗದಲ್ಲಿ ಓವರ್‌ಹೆಡ್ ವಿದ್ಯುದೀಕರಣದ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ರೈಲುಗಳು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.729 ಕೋಟಿ ರೂ.ಗೆ ಏರಿಕೆಯಾದ ಯೋಜನಾ ವೆಚ್ಚಮೈಸೂರು-ಹಾಸನ-ಮಂಗಳೂರು ಸೇರಿದಂತೆ ಒಟ್ಟು 400 ಕಿಲೋಮೀಟರ್ ರೈಲ್ವೆ ಲೈನ್ ವಿದ್ಯುದೀಕರಣದ ಗುತ್ತಿಗೆಯನ್ನು ಆಗಸ್ಟ್ 2021 ರಲ್ಲಿ ‘ರೈಟ್ಸ್ (RITES’ ಸಂಸ್ಥೆಗೆ ನೀಡಲಾಗಿತ್ತು. ಆರಂಭದಲ್ಲಿ ಈ ಯೋಜನೆಗೆ 461.23 ಕೋಟಿ ರೂ. ಅಂದಾಜಿಸಲಾಗಿದ್ದರೂ, ರೈಲ್ವೆ ಸಚಿವಾಲಯವು ಮಾರ್ಚ್ 2026 ರಲ್ಲಿ ಇದರ ಪರಿಷ್ಕೃತ ವೆಚ್ಚವನ್ನು 729.28 ಕೋಟಿ ರೂ.ಗೆ ಹೆಚ್ಚಿಸಿದೆ. ಇದರಲ್ಲಿ ಕೇವಲ ಘಾಟ್ ಸೆಕ್ಷನ್ ವಿದ್ಯುದೀಕರಣಕ್ಕಾಗಿ ಡಿಸೆಂಬರ್ 2023 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ 93.55 ಕೋಟಿ ರೂ. ಖರ್ಚು ಮಾಡಲಾಗಿದೆ.ಈ ಆರ್‌ಡಿಎಸ್‌ಒ ಪ್ರಾಯೋಗಿಕ ಸಂಚಾರದ ವರದಿ ಸಲ್ಲಿಕೆಯಾದ ತಕ್ಷಣ ರೈಲ್ವೆ ಮಂಡಳಿಯು ವಂದೇ ಭಾರತ್ ಸಂಚಾರದ ಅಧಿಕೃತ ಉದ್ಘಾಟನಾ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

[t4b-ticker]
error: Content is protected !!