ಹರ್ಮುಜ್ ನಿರ್ಬಂಧ ತೆರವಿಗೆ ಸಮತಿ

Picture of Savistara

Savistara

Bureau Report

ವಾಷಿಂಗ್ಟನ್: ಮುರಿದು ಬಿದ್ದ ಮಾತುಕತೆ, ತಿಂಗಳ ನಿರಂತರ ಪ್ರಯತ್ನ, ಹಲವು ಸಂಧಾನ ಪ್ರಸ್ತಾಪಗಳ ನಂತರ ಅಮೆರಿಕ-ಇರಾನ್ ನಡುವೆ 60 ದಿನಗಳ ಸಂಭವನೀಯ ಕದನ ವಿರಾಮ ಒಪ್ಪಂದ ಅಂತಿಮಗೊಂಡಿದೆ.ಹರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳಿಸುವುದು, ಇರಾನ್ ಬಂದರುಗಳ ಮೇಲಿನ ಅಮೆರಿಕ ದಿಗ್ಧಂಧನ ತೆರವು, ಜಲಮಾರ್ಗದಲ್ಲಿ ಇರಾನಿಯನ್ ಪಡೆಗಳು ಅಳವಡಿಸಿದ ಜಲಬಾಂಬ್‌ಗಳ ತೆರವು ಷರತ್ತುಗಳನ್ನು ಒಪ್ಪಂದವು ಒಳಗೊಂಡಿದೆ. ಇರಾನ್ ಮೇಲಿನ ಕೆಲವು ಆರ್ಥಿಕ ದಿಗ್ವಂಧನ ತೆರವಿಗೆ ಅಮೆರಿಕ ಸಹ ಸಮ್ಮತಿಸಿದೆ.

ದೃಢಪಡಿಸಿದ ಟ್ರಂಪ್: ‘ಇರಾನ್ ಬಂದರುಗಳ ಮೇಲಿನ ನಿರ್ಬಂಧ ತೆರವುಮಾಡಲಾಗಿದೆ. ಜಲಮಾರ್ಗ ಸಂಚಾರಕ್ಕೆ ಪೂರ್ಣ ಮುಕ್ತವಾಗಲಿದೆ. ಜಲಸಂಧಿಯಲ್ಲಿ ಸಿಲುಕಿದ ಹಡಗುಗಳು ತವರಿನತ್ತ ಪ್ರಯಾಣ ಬೆಳೆಸಲಿವೆ,” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!