ಆಂತರರಾಷ್ಟ್ರೀಯ ಪುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಕಾಲ್ಚೆಂಡು ಮಾಂತ್ರಿಕ ಮೆಸ್ಸಿ

Picture of Savistara

Savistara

Bureau Report

ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಸೋಮವಾರ ವಿದಾಯ ಹೇಳಿದ್ದಾರೆ.

ನಿವೃತ್ತಿ ನಿರ್ಧಾರವು ಮನಸ್ಸಿಗೆ ಅಪಾರ ನೋವುಂಟು ಮಾಡಿದೆ ಎಂದಿರುವ ಅವರು, ಮುನ್ನಡೆಯಲೇ ಬೇಕಾದ ಸಮಯ ಇದಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.“ವಿದಾಯ ಹೇಳುವ ಸಮಯ ಇದಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನೆಲ್ಲ ಸಾಮರ್ಥ್ಯದೊಂದಿಗೆ ಆಡಿದ್ದೇನೆ ಎಂದು ನಿಮಗೆ ಪ್ರಮಾಣ ಮಾಡಿ ಹೇಳುತ್ತೇನೆ. ನಾವು ಇತ್ತೀಚಿನ ಕೆಲವು ವರ್ಷಗಳಲ್ಲಿ ಗೆದ್ದಾಗ ಮಾತ್ರವಲ್ಲ; ಅದಕ್ಕೂ ಮೊದಲೂ ಹಾಗೆಯೇ ಆಡಿದ್ದೆ. ಈ (ಅರ್ಜೆಂಟೀನಾ) ಜೆರ್ಸಿ ತೊಟ್ಟು ಆಡುವುದಕ್ಕಾಗಿ, ಅರ್ಜೆಂಟೀನಾ ನಾಗರಿಕರಾಗಿರುವುದಕ್ಕೆ ನೀವೆಲ್ಲ ಹೆಮ್ಮೆಪಡುವಂತೆ ಮಾಡಲು, ನಿಮ್ಮನ್ನು ಫುಟ್‌ಬಾಲ್ ಮೂಲಕ ಸಂತಸಪಡಿಸಲು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

[t4b-ticker]
error: Content is protected !!