ಧೂಳೂ ಇಲ್ಲ, ಹೊಂಡಗುಂಡಿ-ಟ್ರಾಫಿಕ್‌ನ ಕಿರಿಕಿರಿಯೂ ಇಲ್ಲ | ಕುಕ್ಕೆಶನ ಭಕ್ತಾದಿಗಳಿಗೂ ಅನುಕೂಲ । ಹಣ, ಸಮಯ ಎರಡೂ ಉಳಿತಾಯಮಂಗಳೂರು-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜ‌ರ್ ರೈಲಿಗೆ ಭರ್ಜರಿ ಜನಸ್ಪಂದನೆ

Picture of Savistara

Savistara

Bureau Report

ಮಂಗಳೂರು: ರೈಲು ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಮಂಗಳೂರು-ಪುತ್ತೂರು ನಡುವಿನ ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಣೆಯಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಪ್ಯಾಸೆಂಜರ್ ರೈಲು ಈಗ ತಲಾ ಮೂರು ಟ್ರಿಪ್‌ನಲ್ಲಿ ಮಂಗಳೂರಿನಿಂದ ಸುಬ್ರಹ್ಮಣ್ಯ ಮತ್ತು ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿ ಸುತ್ತಿದ್ದು, ಪ್ರಯಾಣಿಕರಿಗೆ ನಾಲ್ಕು ಟ್ರಿಡ್ ಎಕ್ಸ್ ಪ್ರಸ್ ರೈಲು ಸಹಿತ ಒಟ್ಟು ಏಳು ರೈಲು ಸೇವೆ ಲಭ್ಯವಾದಂತಾಗಿದೆ. ಪ್ಯಾಸೆಂಜರ್ ರೈಲು ಹೆಚ್ಚುವರಿ ಸೇವೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಿದೆ. ನಿತ್ಯ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಅನುಕೂಲ ರೈಲುಗಳ ವಿಸ್ತರಣೆಯಿಂದ ಉದ್ಯೋಗ, ಇತರ ಕೆಲಸ ಕಾರ್ಯಗಳಿಗೆ ನಿತ್ಯ ಮಂಗಳೂರು, ಪುತ್ತೂರು, ಸುಬ್ರಹ್ಮಣ್ಯ ನಡುವೆ ಬೆಳಿಗ್ಗೆ ಮತ್ತು ಸಂಜೆ ಸಂಚಾರಿ ಸುವವರಿಗೆ ಬಹಳಷ್ಟು ಪ್ರಯೋಜನವಾಗಿದ್ದು, ಸಮಯ , ಹಣ ಎರಡೂ ಉಳಿತಾಯವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದಿಂದ

ವಾಹನಗಳಲ್ಲಿ ಸಂಚರಿಸುವುದು ತ್ರಾಸದಾಯಕವಾಗಿದೆ. ಹೀಗಾಗಿ ಟ್ರಾಫಿಕ್ ಕಿರಿಕಿರಿ, ಧೂಳಿನ ಸಮಸ್ಯೆ ಇಲ್ಲದ ರೈಲಲ್ಲೇ ಜನತೆ ಹೆಚ್ಚಾಗಿ ಅವಲಂಬಸುತ್ತಿರುವುದು ಕಂಡುಬರುತ್ತದೆ.

ಭಕ್ತರಿಗೂ ಅನುಕೂಲ

ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಸುಬ್ರಹ್ಮಣ್ಯ ಮತ್ತು ಮಂಗಳೂರು ನಡುವೆ ರೈಲು ಇರುವ ಕಾರಣ ಕುಕ್ಕೆ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೂ ಮಂಗಳೂರಿಗೆ ಬಂದು ಮಂಗಳೂರು ಜಂಗ್ಟನ್, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬೇರೆ ರೈಲುಗಳಲ್ಲಿ ಪ್ರಯಾಣಿಸಲು ಸುಲಭವಾಗಿದೆ. ರಾತ್ರಿ ಸುಬ್ರಹ್ಮಣ್ಯದಿಂದ 8.40ಕ್ಕೆ ಹೊರಡುವ ರೈಲು ಮಂಗಳೂರಿಗೆ 11.30ಕ್ಕೆ ತಲುಪುತ್ತದೆ. ಚೆನ್ನೈ ರೈಲಿನಲ್ಲಿ ಹೋಗಲು ಸುಲಭವಾಗುತ್ತದೆ. ಮಂಗಳೂರು ಸೆಂಟ್ರಲ್‌ನಿಂದ 11.45ಕ್ಕೆ ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ (226383 ಮಂಗಳೂರು ಸೆಂಟ್ರಲ್-ಎಂಜಿಆರ್ ಚಿತ್ರ ಸೆಂಟ್ರಲ್) ನಿರ್ಗಮಿಸುತ್ತದೆ. ಈ ರೈಲಿನಲ್ಲಿ ತೆರಳಿದರೆ ತಮಿಳುನಾಡಿನ ಕಟಪಾಡಿಯಲ್ಲಿ ಇಳಿದು ಮತ್ತೊಂದು ರೈಲಿನಲ್ಲಿ ತಿರುಪತಿ ತಲುಪಬಹುದು.

ಮಂಗಳೂರು-ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ನಡುವೆ 91 ಕಿ.ಮೀ.ಅಂತರವಿದ್ದು, ಪ್ಯಾಸೆಂಜರ್ ರೈಲು ಸಂಚಾರಕ್ಕೆ 2 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಎರಡು ಮುಕ್ಕಾಲು ಗಂಟೆ ತೆಗೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಎಕ್ಸ್ಪ್ರೆಸ್ ರೈಲಿಗೆ 2 ಗಂಟೆ 15 ನಿಮಿಷ ಬೇಕು.ಫರಂಗಿಪೇಟೆ-ಮಂಗಳೂರು ಜಂಕ್ಷನ್ಎರಡೂವರೆ ಧಾಟಿ ಪ್ರಯಾಣನಗದು ರವೆ ರೈಲು ವಿಧಾನವಾಗಿ ಸಂಚರಿಸುತ್ತದೆ. ಈಗ ಮಂಗಳೂರಿನಿಂದ ಹಾಸನವರೆಗೆ ರೈಲ್ವೆ ಹಳಿ ವಿದ್ಯುದ್ದೀಕರಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಎಲ್ಲ ರೈಲುಗಳು ವಿದ್ಯುತ್ ಚಾಲಿತವಾಗಲಿದೆ. ಆ ಬಳಿಕ ರೈಲುಗಳು ಗರಿಷ್ಠ ವೇಗಮಿತಿಯಿಂದ ಸಂಚರಿಸುವುದರಿಂದ ಪ್ರಯಾಣದ ಅವಧಿಯೂ ಇಳಿಮುಖವಾಗಲಿದೆ.

[t4b-ticker]
error: Content is protected !!