ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಮುಖಚರ್ಯ ಹಾಜರಾತಿ (ಫೇಸ್ ರೆಕಗ್ನಿಶನ್) ಜೂನ್ ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಲಿದೆ. ಆರಂಭದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನ್ವಯಿಸಲಿದ್ದು ಬಳಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ಇರಲಿದೆ.ರಾಜ್ಯದಲ್ಲಿ ಕಳೆದ ವರ್ಷ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅದರಲ್ಲೂ ಪ್ರಥಮ ಹಾಗೂ ದ್ವಿತೀಯ ಪಿಯುನಲ್ಲಿ 2.77 ಲಕ್ಷ ವಿದ್ಯಾರ್ಥಿಗಳಿದ್ದರು. 2500 ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಮೊದಲಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಮುಖ 2500F ಹಾಜರಾತಿ ಮಾಡಲು ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಮೊದಲ ಹಂತದಲ್ಲಿ ಸರಕಾರಿ ಪಿಯು ಕಾಲೇಜುಗಳಲ್ಲಿ ಈ ಪ್ರಕ್ರಿಯೆ ಸಾಗಿದ ಬಳಿಕ ನಂತರದ ಹಂತದಲ್ಲಿ ಅನುದಾನಿತ ಪಿಯು ಕಾಲೇಜುಗಳಲ್ಲಿ ಮಾಡಲು ಇಲಾಖೆ ಯೋಜನೆ ರೂಪಿಸಿದೆ.
ಹೇಗೆ ಕೆಲಸ ಮಾಡುತ್ತೆ?
ಪಿಯು ಇಲಾಖೆ ಈಗಾಗಲೇ ಪ್ರತಿ ಕಾಲೇಜಿನಿಂದ ಇಬ್ಬರು ಉಪನ್ಯಾಸಕರನ್ನು ಗುರುತಿಸಿ ಮಾಸ್ಟರ್ ಟ್ರೈನರ್ಸ್ ಆಗಿ ತರಬೇತಿ ನೀಡಿದೆ. ಇವರು ಕಾಲೇಜಿನ ಇತರೆ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಉಪನ್ಯಾಸಕರು ವಿಶೇಷ ಆ್ಯಪ್ ನಲ್ಲಿ ವಿದ್ಯಾರ್ಥಿಗಳ
ಮುಖವನ್ನು ಒಮ್ಮೆ ನೋಂದಣಿ ಮಾಡಿಕೊಳ್ಳುತ್ತಾರೆ. ತರಗತಿ ಆರಂಭದಲ್ಲಿ ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಇರುವಂತೆ ಫೋಟೋ ತೆಗೆದರೆ ಸಾಕು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ವಿದ್ಯಾರ್ಥಿಗಳ ಮುಖವನ್ನು ಗುರುತಿಸಿ ಹಾಜರಾತಿ ಪಟ್ಟಿಯನ್ನು ನೇರವಾಗಿ ಇಲಾಖೆಯ ಸರ್ವ‌್ರಗೆ ರವಾನಿಸುತ್ತದೆ.









































