ಯುದ್ಧ ಆರಂಭವಾಗಿದೆ ಇರಾನ್ ನಾಯಕ ಖಮೇನಿ

Picture of Savistara

Savistara

Bureau Report

ಟೆಹ್ರಾನ್: ಟೆಹ್ರಾನ್ ನಗರವನ್ನು ಜನರು ಕೂಡಲೇ

ತೊರೆಯಬೇಕು. ಯುದ್ಧಕ್ಕೆ ಅಂತ್ಯ ಹಾಡಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯೊಡ್ಡಿದ ನಡುವೆಯೇ ಯುದ್ಧ ಆರಂಭವಾಗಿದೆ ಎಂದು ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಬುಧವಾರ (ಜೂನ್ 18) ತಿರುಗೇಟು ನೀಡಿರುವುದಾಗಿ ವರದಿಯಾಗಿದೆ.

“ಕತ್ತಿಯನ್ನು ಹಿಡಿದು ದ್ವಾರವನ್ನು ಪ್ರವೇಶಿಸುವ ವ್ಯಕ್ತಿಯೊಬ್ಬನ ಚಿತ್ರದೊಂದಿಗೆ” ಯುದ್ಧ ಪ್ರಾರಂಭವಾಗುತ್ತಿದೆ” ಎಂದು ಖಮೇನಿ ತನ್ನ ಎಕ್ಸ್ ಖಾತೆಯಲ್ಲಿ ಫಾರ್ಸಿ ಭಾಷೆಯಲ್ಲಿ ಫೋಸ್ಟ್ ಹಾಕಿರುವುದಾಗಿ ವರದಿ ತಿಳಿಸಿದೆ.

“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಯಾವುದೇ ಕಾರಣಕ್ಕೂ ಭಯೋ*ತ್ಪಾದಕ ಜಿಯೋನಿಸ್ಟ್‌ (ಯಹೂದಿ) ಆಡಳಿತಕ್ಕೆ ಯಾವ ಕರುಣೆಯನ್ನೂ ತೋರಿಸುವುದಿಲ್ಲ” ಎಂದು ಖಮೇನಿ ಮತ್ತೊಂದು ಪೋಸ್ಟ್ ನಲ್ಲಿ ಆಕ್ರೋಶ ಹೊರಹಾಕಿರುವುದಾಗಿ ವರದಿ ಹೇಳಿದೆ.

ಭಯೋ*ತ್ಪಾದಕ ಜಿಯೋನಿಸ್ಟ್‌ ಆಡಳಿತಕ್ಕೆ ನಾವು ಪ್ರಬಲ ತಿರುಗೇಟು ನೀಡುತ್ತೇವೆ. ಇದರಲ್ಲಿ ಯಾವುದೇ ಕರುಣೆಯ ಪ್ರಶ್ನೆಯೇ ಇಲ್ಲ ಎಂದು ಖಮೇನಿ ಕಿಡಿಕಾರಿರುವುದಾಗಿ ವರದಿ ತಿಳಿಸಿದೆ.

[t4b-ticker]
error: Content is protected !!