ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನುಮತಿ ರಹಿತ ಕಾಮಗಾರಿ: ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

Picture of Savistara

Savistara

Bureau Report

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅನುಮತಿ ರಹಿತ ಕಾಮಗಾರಿಗಳ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯ ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ನ.26ರಂದು ಮಚ್ಚಿಮಲೆ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ ನಡೆಸಿದರು.

ದೂರುದಾರರಾದ ಮಚ್ಚಿಮಲೆ ವಿರೂಪಾಕ್ಷ ಭಟ್ ಹಾಗೂ ದಿನೇಶ್ ಜೈನ್ ಅವರು W.P. No. 32628/2026 ದಾವೆಯನ್ನು ದಾಖಲು ಮಾಡಿದ್ದು, ನ್ಯಾಯಾಲಯ ನ.23.11.2026ರಂದು ತಡೆಯಾಜ್ಞೆ ನೀಡಿದೆ.

Advertisement

ದೇವಸ್ಥಾನದ ಆಡಳಿತ ಸಮಿತಿ, ಧಾರ್ಮಿಕ ದತ್ತಿ ಇಲಾಖೆ ಮತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಅನುಮತಿ ಪಡೆಯದೆ ಕಾಮಗಾರಿಗಳು, ಟೆಂಡರ್ ಪ್ರಕ್ರಿಯೆಗಳು, ಹಣ ಸಂಗ್ರಹಣೆ ನಡೆದಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Advertisement

ಪ್ರಮುಖ ಆರೋಪಗಳು:

Advertisement
  • ಅಭಿವೃದ್ಧಿ ಸಮಿತಿ ರಚನೆ ನಿಯಮ ಬಾಹಿರ
  • ಅನುಮೋದನೆಯಾಗದ ಜೀರ್ಣೋದ್ಧಾರ ಸಮಿತಿ ಹೆಸರಿನಲ್ಲಿ ಹಣ ಸಂಗ್ರಹ, ಸಭೆ, ಟೆಂಡರ್
  • ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಪೂರ್ವಾನುಮತಿ ಇಲ್ಲ
  • ಹೊರಾಂಗಣದ 5 ಕಟ್ಟೆ ತೆರವು, ನೂತನ ಶಿಲಾಮಯ ಕಟ್ಟಡ ನಿರ್ಮಾಣದಲ್ಲಿ ಟೆಂಡರ್ ಇಲ್ಲ
  • ನವಗ್ರಹ ಗುಡಿ, ಅಯ್ಯಪ್ಪ ಸನ್ನಿಧಿ, ನಟರಾಜ ವೇದಿಕೆ ಸಭಾಂಗಣ ತೆರವುಗೆ ಮೌಲ್ಯ ಮಾಪನ, ಟೆಂಡರ್, ಅನುಮೋದನೆ ಇಲ್ಲ
  • ಚಿನ್ನದ ಮುಖವಾಡಕ್ಕೆ ಚಿನ್ನ ಸಂಗ್ರಹಣೆಗೆ ಆಗಮ ಪಂಡಿತರ ಅಭಿಪ್ರಾಯ, ಇಲಾಖಾ ಅನುಮತಿ ಇಲ್ಲ
  • ವಾರ್ಷಿಕ ಲೆಕ್ಕಪತ್ರಗಳಲ್ಲಿ ಲೋಪದೋಷ

ನ್ಯಾಯಾಲಯ, ಮುಂದಿನ ವಿಚಾರಣೆಯವರೆಗೆ ಇಲಾಖಾ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ, ಟೆಂಡರ್ ಕರೆಯಬಾರದು, ಈ ಮೊದಲೇ ಕರೆದಿರುವ ಟೆಂಡರ್ ಸ್ಥಗಿತಗೊಳಿಸಬೇಕು, ನಿಯಮ ಬಾಹಿರ ಕಾಮಗಾರಿ ಮಾಡಬಾರದು ಎಂದು ಆಡಳಿತ ಸಮಿತಿ ಮತ್ತು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Advertisement

ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಆದರೆ ಅಭಿವೃದ್ಧಿ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಒಪ್ಪಲಾಗದು. ನ್ಯಾಯಾಲಯದ ಆದೇಶವನ್ನು ಸಂಪೂರ್ಣ ಪಾಲಿಸಬೇಕು ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ಹೇಳಿದರು.

Advertisement

Advertisement
[t4b-ticker]
error: Content is protected !!