ಇರಾನ್ ಮೇಲೆ ಅಮೆರಿಕಾ ದಾಳಿ: ಇಸ್ರೇಲ್ ಗೆ ಕೌಂಟರ್ ಅಟ್ಯಾಕ್ ಕೊಟ್ಟ ಇರಾನ್

Picture of Savistara

Savistara

Bureau Report

ಟೆಲ್ ಅವಿವ್: ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದ ಕೆಲವೇ ಘಂಟೆಗಳಲ್ಲಿ ಇರಾನ್ ದೇಶವು ಇಸ್ರೇಲ್ ವಿರುದ್ಧ ದಾಳಿ ನಡೆಸಿದೆ.ಈ ಬಗ್ಗೆ ಟ್ವಿಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ, “ಇರಾನ್‌ನ ಮತ್ತೊಂದು ಕ್ಷಿಪಣಿ ಉಡಾವಣೆಯಿಂದಾಗಿ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿದ್ದವು” ಎಂದಿದೆ.ಎರಡು ಮಧ್ಯಪ್ರಾಚ್ಯ ದೇಶಗಳ ನಡುವಿನ ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ ಮತ್ತು ಇಸ್ರೇಲ್‌ ಕ್ಷಿಪಣಿ ಮತ್ತು ಡೋನ್ ದಾಳಿಗಳನ್ನು ನಡೆಸುತ್ತಿವೆ.ಆಪರೇಷನ್‌ ರೈಸಿಂಗ್ ಲಯನ್ ಹೆಸರಿನಲ್ಲಿ ಇಸ್ರೇಲ್‌ ದೇಶವು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಯುದ್ಧ ಆರಂಭವಾಯಿತು. ಇರಾನ್ ಕೂಡಾ ಬಳಿಕ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದೀಗ ಯುದ್ಧಕ್ಕೆ ಅಮೆರಿಕ ಕೂಡಾ ಎಂಟ್ರಿಯಾಗಿದೆ.ಇರಾನ್ ನ ಮೂರು ಪರಮಾಣು ನೆಲೆಗಳ ಮೇಲೆ ಶನಿವಾರ ತಡರಾತ್ರಿ ಅಮೆರಿಕ ದಾಳಿ ನಡೆಸಿದೆ. ಫಾರ್ಡೋ, ನತಾಂಜ್, ಇಸ್ಪೃಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ. “ಇದು ಆರಂಭವಷ್ಟೇ, ಇನ್ನೂ ಕೆಲವು ಗುರಿಗಳು ಬಾಕಿ ಇದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!