ಪ್ರತಿಯೊಬ್ಬ ಅಮೆರಿಕ ಪ್ರಜೆ ನಮ್ಮ ಟಾರ್ಗೆಟ್ : ಇರಾನ್ ಲ್ಲಿ ಮೊಳಗಿದ ಘೋಷಣೆ

Picture of Savistara

Savistara

Bureau Report

ತೆಹ್ರಾನ್ (ಜೂ.22) ಇರಾನ್ ನ್ಯೂಕ್ಲಿಯರ್ ಘಟಕಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸುವ ಮೂಲಕ ಯುದ್ಧಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದೆ. ಇರಾನ್ ಶಾಂತಿ ಬಯಸಿದ್ದರೆ ಮತ್ತಷ್ಟು ದಾಳಿಗಳು ನಡೆಯಲಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಇರಾನ್ ಮೇಲೆ ಅಮರಿಕ ನಡೆಸಿದ ದಾಳಿ ಇದೀಗ ವಿಶ್ವ ಮಹಾಯುದ್ಧಕ್ಕೆ ಮುನ್ನಡಿ ಬರೆಯಲಿದೆ ಎಂದು ಹೇಳಲಾಗುತ್ತಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ದಾಳಿಯಿಂದ ಕೆರಳಿರುವ ಇರಾನ್ ಪ್ರತಿ ದಾಳಿಗೆ ಸಜ್ಜಾಗುತ್ತಿದೆ. ಇದೀಗ ಇರಾನ್‌ಗೆ ರಹಸ್ಯವಾಗಿ ಕೆಲ ರಾಷ್ಟ್ರಗಳು ಬೆಂಬಲ ನೀಡುವ ಸಾಧ್ಯತೆ ಇದೆ. ಇದರಿಂದ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಇದರ ನಡುವೆ ಇರಾನ್‌ನಲ್ಲಿ ಘೋಷವಾಕ್ಯಗಳು ಮೊಳಗುತ್ತಿದೆ. ಅಮೆರಿಕ ದಾಳಿ ಮಾಡಿ ತಪ್ಪು ಮಾಡಿದೆ. ಇದೀಗ ಅಮೆರಿಕದ ಪ್ರತಿಯೊಬ್ಬ ಪ್ರಜೆ ನಮ್ಮ ಟಾರ್ಗೆಟ್ ಅನ್ನೋ ಎಚ್ಚರಿಕೆಗಳು ಬರುತ್ತಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!