ಅ.18ರಿಂದ ಕುಮಾರ ಪರ್ವತ ಚಾರಣ ಆರಂಭ

Picture of Savistara

Savistara

Bureau Report

ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣದ ಎರಡು ದಾರಿಗಳ ಪೈಕಿ ಒಂದರಲ್ಲಿ ಅ.18ರಿಂದ ಆರಂಭವಾಗಲಿದೆ. ಬಿದಹಳ್ಳಿ- ಕುಮಾರ ಪರ್ವತ-ಬಿದಹಳ್ಳಿ ಮಾರ್ಗ ದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಚಾರಣಿಗರು ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.ಚಾರಣದ ವೇಳೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಪರಿಸರದ ಸ್ವಚ್ಛತೆ ಕಾಪಾಡುವುದು, ನಿಗದಿತ ಸಮಯಕ್ಕೆ ಹಾಜರಾಗುವುದು ಹಾಗೂ ಕರ್ತವ್ಯದಲ್ಲಿರುವ ಸಿಬಂದಿಗೆ ಸಹಕರಿಸುವುದು ಕಡ್ಡಾಯವಾಗಿದೆ.

ಪ್ರಕೃತಿಯ ಸಂರಕ್ಷಣೆಗೆ ಆದ್ಯತೆ ನೀಡಿ, ಚಾರಣದ ವೇಳೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಚಾರಣ ಆರಂಭಕ್ಕೆ ದಿನಾಂಕ ನಿಗದಿಯಾಗಿಲ್ಲ.

[t4b-ticker]
error: Content is protected !!