ಅಧ್ಯಕ್ಷ ಸ್ಥಾನಕ್ಕೆ ವಿದ್ಯಾಮಾತಾ ಅಕಾಡಮಿಯ ಮೂಲಕ ಯುವ ಜನರನ್ನು ಉದ್ಯೋಗಿಗಳನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿರುವ, 50 ವರ್ಷಗಳ ಇತಿಹಾಸವಿರುವ ಜೆಸಿಐ ಪುತ್ತೂರಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವೀ ಯುವ ನಾಯಕ ಭಾಗೇಶ್ ರೈ ಅವರನ್ನು ನೇಮಕಗೊಳಿಸಲಾಗಿದೆ.
Puttur Buntara Yuva Sangha :ಪುತ್ತೂರು ತಾಲೂಕು ಬಂಟರ ಸಂಘದ ಯುವ ವಿಭಾಗಕ್ಕೆ ನೂತನ ಸಾರಥಿಗಳ ನೇಮಕವಾಗಿದ್ದು, ನೂತನ ಅಧ್ಯಕ್ಷರಾಗಿ ಭಾಗ್ಗೇಶ್ ರೈ ಹಾಗೂ 2025 26ರ ಸಾಲಿನ ಕ್ರಿಕೆಟ್ ಟೂರ್ನಮೆಂಟ್ ಸಂಚಾಲಕರಾಗಿ ಕಾರ್ತಿಕ್ ರೈ ಬೆಳಿಯೂರು ಕಟ್ಟೆ ಅವರನ್ನು ನೇಮಕ ಮಾಡಲಾಗಿದೆ.
ತಾಲೂಕು ಬಂಟರ ಸಂಘದ ಶಿಫಾರಸಿನಂತೆ. ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಅವರು ಈ ಮಹತ್ವದ ನೇಮಕಾತಿಯನ್ನು ಘೋಷಿಸಿದ್ದಾರೆ.
ಅನುಭವಿ ನಾಯಕತ್ವಕ್ಕೆ ಮಣೆ:ಕಳೆದ ಎರಡು ವರ್ಷಗಳಿಂದ ಪುತ್ತೂರು ತಾಲೂಕು ಯುವ ಬಂಟರ ಸಂಘವನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಿ, ಯುವ ಸಮುದಾಯಕ್ಕೆ ಪ್ರೇರಣಾ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದ ಯುವ ಉದ್ಯಮಿ ಹರ್ಷ ಕುಮಾರ್ ರೈ ಮಾಡವು ಅವರ ಅವಧಿ ಮುಕ್ತಾಯಗೊಂಡಿದೆ.ಅವರ ಅವಧಿಯಲ್ಲಿ ಸಂಘಟನೆಯು ಅದ್ಭುತ ಬೆಳವಣಿಗೆಯನ್ನು ಕಂಡಿತ್ತು. ಇದೀಗ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾಮಾತಾ ಅಕಾಡಮಿಯ ಮೂಲಕ ಯುವ ಜನರನ್ನು ಉದ್ಯೋಗಿಗಳನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿರುವ, 50 ವರ್ಷಗಳ ಇತಿಹಾಸವಿರುವ ಜೆಸಿಐ ಪುತ್ತೂರಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವೀ ಯುವ ನಾಯಕ ಭಾಗ್ಯಶ್ ರೈ ಅವರನ್ನು ನೇಮಕಗೊಳಿಸಲಾಗಿದೆ.
ಕ್ರಿಕೆಟ್ ಸಂಚಾಲಕರಾಗಿ ಕಾರ್ತಿಕ್ ರೈ:ಅನೇಕ ವರ್ಷಗಳಿಂದ ನಡೆಯುತ್ತಿರುವ ಪ್ರತಿಷ್ಠಿತ ಯುವ ಬಂಟರ ವಿಭಾಗದ ಕ್ರಿಕೆಟ್ ಪಂದ್ಯಾಟದ 2025-26ನೇ ಸಾಲಿನ ಸಂಚಾಲಕರನ್ನಾಗಿ ಉತ್ತಮ ಕ್ರಿಕೆಟ್ ಆಟಗಾರರು, ಯುವ ಉದ್ಯಮಿ, ಟಾಟಾ ಪವರ್ ಸೋಲಾರ್ ರೂಫ್ ಡೀಲರ್ ಲಿಶಿ ಪವರ್ ಸೊಲ್ಯೂಷನ್ ಮಾಲಕ ಕಾರ್ತಿಕ್ ರೈ ಬೆಳಿಯೂರು ಕಟ್ಟೆ ಅವರನ್ನು ನೇಮಕಗೊಳಿಸಲಾಗಿದೆ ಎಂದು ಬಂಟರ ಸಂಘದ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.













































