ಗಾಡಿ ನಂಬರ್ ಮ್ಯಾಚ್ ಆಗಿಲ್ಲ ಅಂದ್ರೆ ಟ್ರಾವೆಲ್ ಮಾಡಲೇಬೇಡಿ : ಕಮಿಷನ‌ರ್ ಎಚ್ಚರಿಕೆ

Picture of Savistara

Savistara

Bureau Report

ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿ ಆಟೋ, ಕ್ಯಾಬ್ ಬುಕ್ ಮಾಡುವವರಿಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕಠಿಣ ಎಚ್ಚರಿಕೆ ನೀಡಿದ್ದಾರೆ.ಗಾಡಿ ಬುಕ್ ಮಾಡುವಾಗ ಆಪ್‌ನಲ್ಲಿ ಯಾವ ಸಂಖ್ಯೆ ಕಾಣಿಸುತ್ತದೆಯೋ ಗಾಡಿ ಬಂದಾಗಲೂ ನಂಬರ್‌ಪ್ಲೇಟ್‌ನಲ್ಲಿ ಅದೇ ಸಂಖ್ಯೆ ಕಾಣಿಸಬೇಕು. ಎರಡು ಮ್ಯಾಚ್ ಆಗಿಲ್ಲ ಎಂದಾದರೆ ಆ ಗಾಡಿಯನ್ನು ಹತ್ತಬೇಡಿ ಹಾಗೂ ಇಂತಹ ಪ್ರಕರಣಗಳನ್ನು ವರದಿ ಮಾಡಿ ಎಂದು ಹೇಳಿದ್ದಾರೆ.ನೀವು, ಕ್ಯಾಬ್ ಅಥವಾ ಆಟೋ ಬುಕ್ ಮಾಡಿದಾಗ, ಆಪ್‌ನಲ್ಲಿ ಬುಕ್ ಆಗುವ ನಂಬರ್ ಹಾಗು ಪಿಕ್ ಮಾಡಲು ಬರುವ ವಾಹನದ ನಂಬರ್‌ ಹೊಂದಾಣಿಕೆಯಾಗದಿದ್ದರೆ ಖಂಡಿತವಾಗಿಯೂ ಆ ವಾಹನವನ್ನು ಹತ್ತಬೇಡಿ. ಅದರಂತೆ, ಉಬ‌ರ್, ಓಲಾ, ರಾಪಿಡೊ, ನಮ್ಮ ಯಾತ್ರೆಯಂತಹ ರೈಡ್-ಹೇಲಿಂಗ್ ಆ್ಯಪ್‌ನಲ್ಲಿ ಕಾಣಿಸುವ ವಾಹನದ ನಂಬ‌ರ್ ಅಥವಾ ಚಾಲಕನ ಹೆಸರು, ನಿಮ್ಮ ಎದುರಿಗಿರುವ ವಾಹನಕ್ಕೆ ಹೊಂದಾಣಿಕೆಯಾಗದಿದ್ದರೆ ಯಾವುದೇ ಕಾರಣಕ್ಕೂ ಪ್ರಯಾಣ ಮಾಡಬೇಡಿ ಎಂದು ಬೆಂಗಳೂರು ಪೊಲೀಸ್ ಕಮಿಷನ‌ರ್ ಖಡಕ್ ಸೂಚನೆ ನೀಡಿದ್ದಾರೆ.

ಆಪ್‌ನಲ್ಲಿ ದಾಖಲಾಗಿರದ ವಾಹನವನ್ನು ಹತ್ತಿದರೆ, ಆ್ಯಪ್‌ನ ಜಿಪಿಎಸ್ ಟ್ರ್ಯಾಕಿಂಗ್ ಮತ್ತು ತುರ್ತು ಎಸ್‌ಒಎಸ್ ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ. ಜೊತೆಗೆ, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಈ ವಾಹನ ನಮ್ಮ ಸಿಸ್ಟಮ್ ಮೂಲಕ ಬುಕ್ ಆಗಿಲ್ಲ ಎಂದು ಹೇಳಿ ಆ್ಯಪ್‌ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು.ಅದರಲ್ಲೂ ಸಿಂಗಲ್ ನಂಬರ್ ಪ್ಲೇಟ್ ದುರುಪಯೋಗಪಡಿಸಿಕೊಳ್ಳುವ ಅಥವಾ ಸೂಕ್ತ ಪರವಾನಗಿ ಮತ್ತು ಪೊಲೀಸ್‌ ವೆರಿಫಿಕೇಶನ್‌ ಇಲ್ಲದ ಚಾಲಕರು ಇಂತಹ ಕೃತ್ಯ ಎಸಗುತ್ತಾರೆ ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!