ಮೂರೇ ಗಂಟೆಗೆ ಮುರಿದುಬಿತ್ತಾ ಕೈ-ಬಿಜೆಪಿ ಮೈತ್ರಿ? ಸ್ಥಳೀಯ ನಾಯಕರಿಗೆ ಫಡ್ನವೀಸ್ ಎಚ್ಚರಿಕೆ

Picture of Savistara

Savistara

Bureau Report

ಅಂಬರ್ನಾಥ್ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಕಾಣಿಸಿಕೊಂಡಿರುವ ಹೊಸ ರಾಜಕೀಯದಾಟವು ಯಾರು ಶಾಶ್ವತ ಮಿತ್ರರೂ ಅಲ್ಲ, ವೈರಿಗಳು ಅಲ್ಲ ಎಂಬುದಕ್ಕೆ ಸಾಕ್ಷಿ! ಯಾಕಂದರೆ, ಕಾಂಗ್ರೆಸ್ (Congress) ಮುಕ್ತ ಭಾರತದ ಘೋಷಣೆಯನ್ನು ಕೂಗುತ್ತಿದ್ದ ಬಿಜೆಪಿಯೇ (Bjp) ಇದೀಗ, ತನ್ನ ಮಿತ್ರ ಏಕಾನಾಥ್​ ಶಿಂಧೆಯ ಶಿವಸೇನೆಯನ್ನೇ ಅಧಿಕಾರದಿಂದ ದೂರವಿಡಲು ಬದ್ಧ ವೈರಿ ಕಾಂಗ್ರೆಸ್​ ಜೊತೆ ಕೈಜೋಡಿಸಿದೆ. ಆದರೆ, ಇದು ವಿವಾದವಾಗುತ್ತಿದ್ದಂತೆ, ಪ್ರತಿಕ್ರಿಯಿಸಿರುವ ಫಡ್ನವಿಸ್, “ಕಾಂಗ್ರೆಸ್, ಎಐಎಂಐಎಂ ಜೊತೆಗಿನ ಸ್ಥಳೀಯ ಚುನಾವಣಾ ಮೈತ್ರಿಯನ್ನು ಕೊನೆಗೊಳಿಸುವಂತೆ” ಬಿಜೆಪಿ ಘಟಕಗಳಿಗೆ ಸೂಚಿಸಿದ್ದಾರೆ.

ಮೈತ್ರಿ ಕುರಿತು ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ (Maharashtra Chief Minister) ದೇವೇಂದ್ರ ಫಡ್ನವಿಸ್ (Devendra Fadnavis), “ಪಕ್ಷದ ಶಿಸ್ತು ಮತ್ತು ತತ್ವಗಳಿಗೆ ವಿರುದ್ಧವಾಗಿರುವ ಯಾವುದೇ ಸ್ಥಳೀಯ ಮೈತ್ರಿಗಳನ್ನು ತಕ್ಷಣವೇ ರದ್ದುಪಡಿಸುವಂತೆ” ಕಠಿಣ ಸೂಚನೆ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್ ಮತ್ತು ಎಐಎಂಐಎಂ ಜೊತೆಗಿನ ಮೈತ್ರಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಮುಂದುವರೆದು, “ಪಕ್ಷದ ಹಿರಿಯ ನಾಯಕತ್ವದ ಅನುಮತಿ ಇಲ್ಲದೆ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಶಿಸ್ತಿನ ಉಲ್ಲಂಘನೆಯಾಗುತ್ತದೆ” ಎಂದ ಅವರು, ಕಾಂಗ್ರೆಸ್ ಅಥವಾ ಎಐಎಂಐಎಂ ಜೊತೆಗಿನ ಮೈತ್ರಿಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದು ನೇರವಾಗಿ ಎಚ್ಚರಿಸಿದ್ದಾರೆ. ಜೊತೆಗೆ ಇಂತಹ ನಿರ್ಧಾರಗಳನ್ನು ಕೈಗೊಂಡ ಸ್ಥಳೀಯ ನಾಯಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಸಂದೇಶವನ್ನೂ ನೀಡಿದ್ದಾರೆ.

AIMIM-ಕಾಂಗ್ರೆಸ್ ಜೊತೆ ಬಿಜೆಪಿ ಮೈತ್ರಿ

ಅಂಬರ್ನಾಥ್‌ನಲ್ಲಿ ಬಿಜೆಪಿ- ಕಾಂಗ್ರೆಸ್ ಮೈತ್ರಿ!

ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಬಣವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ ಈ ಮೈತ್ರಿಕೂಟದಲ್ಲಿ ಸೇರಿಕೊಂಡಿದೆ. ಇದರಿಂದಾಗಿ ಅಂಬರ್ನಾಥ್ ಪುರಸಭೆಯಲ್ಲಿ ಅಧಿಕಾರದ ಸಮತೋಲನ ಬದಲಾಗಿದೆ. ಬಿಜೆಪಿಯ ತೇಜಶ್ರೀ ಕಾರಂಜುಲೆ ಅವರು ಮೇಯರ್ ಸ್ಥಾನ ಗೆದ್ದಿದ್ದಾರೆ. ಶಿಂಧೆ ಬಣದ ಶಿವಸೇನೆ ವಿರೋಧ ಪಕ್ಷದ ಸ್ಥಾನಕ್ಕೆ ಬಂದಿದೆ.

ಅಂಬರ್ನಾಥ್‌ನಲ್ಲಿ 32 ಕೌನ್ಸಿಲರ್‌ಗಳ ಒಕ್ಕೂಟವು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದೆ. ಬಿಜೆಪಿಯ 14, ಕಾಂಗ್ರೆಸ್‌ನ 12 ಮತ್ತು ಎನ್‌ಸಿಪಿಯ 4 ಸದಸ್ಯರು ಸೇರಿದ್ದಾರೆ. ಈ ಮೈತ್ರಿಕೂಟವನ್ನು ಅಂಬರ್ನಾಥ್ ವಿಕಾಸ್ ಅಘಾಡಿ ಎಂದು ಹೆಸರಿಸಲಾಗಿದೆ. ಈ ಬೆಳವಣಿಗೆಯು ಶಿಂಧೆ ಬಣದಲ್ಲಿ ಅಸಮಾಧಾನ ಮೂಡಿಸಿದೆ. ಶಿಂಧೆ ಬಣದ ಶಾಸಕ ಡಾ. ಬಾಲಾಜಿ ಕಿನಿಕರ್ ಅವರು, ಕಾಂಗ್ರೆಸ್ ಮುಕ್ತ ಭಾರತದ ಘೋಷಣೆ ಮಾಡಿದ ಬಿಜೆಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಶಿವಸೇನೆಗೆ ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿದ್ದಾರೆ.

ಅಕೋಟ್‌ನಲ್ಲಿ ಬಿಜೆಪಿ AIMIM ಜೊತೆ ಮೈತ್ರಿ!

ಇನ್ನೂ ಅಕೋಟ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಬಿಜೆಪಿ AIMIM ಜೊತೆ ಮೈತ್ರಿ ಮಾಡಿಕೊಂಡಿದ್ದು ಮತ್ತೊಂದು ಅಚ್ಚರಿಯಾಗಿದೆ. ಅಕೋಟ್‌ನಲ್ಲಿ ಚುನಾವಣೆಯಲ್ಲಿ ಬಿಜೆಪಿಯ ಮಾಯಾ ಧುಲೆ ಮೇಯರ್ ಹುದ್ದೆ ಗೆದ್ದರೂ, 35 ಸದಸ್ಯರ ಪುರಸಭೆಯಲ್ಲಿ ಬಿಜೆಪಿ ಕೇವಲ 11 ಸೀಟುಗಳನ್ನು ಗೆದ್ದಿತು. ಬಹುಮತಕ್ಕೆ ಕೊರತೆಯಿಂದ ಬಿಜೆಪಿ ಅಕೋಟ್ ವಿಕಾಸ್ ಮಂಚ್ ಎಂಬ ಹೊಸ ಒಕ್ಕೂಟ ರಚಿಸಿತು. ಇದರಲ್ಲಿ AIMIMನ 5 ಸದಸ್ಯರು ಸೇರಿಕೊಂಡಿದ್ದಾರೆ. ಶಿಂಧೆ ಬಣದ ಶಿವಸೇನೆ, ಅಜಿತ್ ಪವಾರ್ NCP, ಶರದ್ ಪವಾರ್ NCP ಮತ್ತು ಬಚ್ಚು ಕಾಡು ಅವರ ಪ್ರಹಾರ್ ಜನಶಕ್ತಿ ಪಕ್ಷವೂ ಸೇರಿವೆ. ಈ ಒಕ್ಕೂಟವನ್ನು ಅಕೋಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ನಲ್ಲಿ ನೋಂದಾಯಿಸಲಾಗಿದೆ. ಇದರಿಂದ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ 25 ಸದಸ್ಯರ ಬೆಂಬಲ ಸಿಕ್ಕಿದೆ. ಕಾಂಗ್ರೆಸ್‌ನ 6 ಮತ್ತು ವಂಚಿತ್ ಬಹುಜನ್ ಅಘಾಡಿಯ 2 ಸೀಟುಗಳು ವಿರೋಧ ಪಕ್ಷದ್ದಾಗಿವೆ.

[t4b-ticker]
error: Content is protected !!