ಸುಳ್ಯ:ಶಾಸಕಿ ಭಾಗೀರಥಿ ಮುರುಳ್ಯ ಬಗ್ಗೆ ಅವಹೇಳನಕಾರಿ ಪೋಸ್ಟರ್ |ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಎನ್ ಟಿ ವಸಂತ ಖಂಡನೆ

Picture of Savistara

Savistara

Bureau Report

ಸುಳ್ಯ:ತಾಲೂಕಿನ ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸಕಿ ಭಾಗೀರಥಿ ಮುರುಳ್ಯ ಬಗ್ಗೆ ಅವಹೇಳನ, ಕೆಟ್ಟ ಪೋಸ್ಟ್ ಮಾಡಿರುವ ವ್ಯಕ್ತಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಸುಳ್ಯ ಅಧ್ಯಕ್ಷ ಎನ್. ಟಿ ವಸಂತ ಖಂಡಿಸಿದ್ದಾರೆ.ಶಾಸಕೀಯರಾಗಿರುವ ಭಾಗೀರಥಿ ಮುರುಳ್ಯ ನಮ್ಮದೇ ಗ್ರಾಮದವರು ಪಕ್ಷ,ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡವರು ಅನೇಕ ವಿಚಾರಗಳಲ್ಲಿ ಹೋರಾಟ ಭಾಗಿಯಾಗಿದ್ದಾರೆ ಇಂತವರ ಬಗ್ಗೆ ಅದೂ ಕೂಡ ಮಹಿಳೆಯೆಂದು ಲೆಕ್ಕಿಸದೆ ಅಸಂಬದ್ಧವಾಗಿ ಪೋಸ್ಟ್ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ, ಕೆಲವೊಂದು ವ್ಯಕ್ತಿಗಳು ಪೋಸ್ಟರ್ ಮಾಡಿರುವ ವ್ಯಕ್ತಿ ಸೌಜನ್ಯ ಹೋರಾಟ ಸಮಿತಿ ಸದಸ್ಯನೆಂದು ಅಪಪ್ರಚಾರ ಮಾಡುತ್ತಿದ್ದು ನಮಗೂ ಅವನಿಗೂ ಯಾವುದೇ ಸಂಭಂದವಿಲ್ಲ ಇಂತಹ ಕೀಳು ಮನಸ್ಸಿನ ವ್ಯಕ್ತಿಯ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಎನ್ ಟಿ ವಸಂತ್ ಒತ್ತಾಯಿಸಿದ್ದಾರೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!