ಬೆಂಗಳೂರು: ರಾಜ್ಯದ 5 ಐಪಿಎಸ್ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬದಲಾವಣೆಯಾಗಿದ್ದು, ಹೊಸಬರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಹೊಸ ವರ್ಷಕ್ಕೆ ರಾಜ್ಯದ 48 ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಈ ಬೆನ್ನಲ್ಲೆ ಮತ್ತೆ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. 2004ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪಿ.ಎಸ್ ಹರ್ಷ ಅವರನ್ನು ಬಳ್ಳಾರಿ ವಲಯದ ಹೊಸ ಪೊಲೀಸ್ ಮಹಾನಿರೀಕ್ಷಕರಾಗಿ ನೇಮಿಸಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ ವರ್ಗಾಯಿಸಲಾಗಿದೆ.
ಬಳ್ಳಾರಿಗೆ ಹೊಸ ಎಸ್‌ಪಿಬೆಂಗಳೂರಿನ ಗುಪ್ತವಾರ್ತೆ ವಿಭಾಗದ ಡಿಸಿಪಿ ಆಗಿದ್ದ ಸುಮನ್ ಪನ್ನೇಕರ್ ಅವರನ್ನು ಬಳ್ಳಾರಿಯ ಹೊಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಈ ಹಿಂದೆ 31ರಂದು ಹೊಸದಾಗಿ ಎಸ್‌ಪಿ ಆಗಿದ್ದ ಪವನ್ ನಿಜ್ಜೂರ್ ಅವರನ್ನು ಗಲಾಟೆ ಕಾರಣಕ್ಕೆ ಅಮಾನತು ಮಾಡಲಾಗಿತ್ತು.ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆಐಎಎಸ್ ಅಧಿಕಾರಿಗಳಾದ ಸಲ್ಮಾ ಕೆ.ಫಹೀಮ್ ಮತ್ತು ಕನಗವಲ್ಲಿ ಎಂ. ಅವರನ್ನು ಬುಧವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿದ್ದ ಸಲ್ಮಾ ಕೆ.ಫಹೀಮ್ ಅವರನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅಲ್ಲದೆ, ಪರಿಶಿಷ್ಟ ಪಂಗಡ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ.ಈ ಮೊದಲು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಕನಗವಲ್ಲಿ ಎಂ. ಅವರನ್ನು ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ, ರಾಜ್ಯ ವೈದ್ಯಕೀಯ ಉಪಕರಣಗಳ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನೂ ಅವರಿಗೆ ವಹಿಸಲಾಗಿದೆ.













































