ಕೈಕೊಟ್ಟ ಎನ್​ಸಿಪಿ ಬಣಗಳ ಮೈತ್ರಿ; ಪುಣೆ, ಪಿಂಪ್ರಿ-ಚುಂಚವಾಡ್​ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ; ಎನ್​ಸಿಪಿ ಕೈ ತಪ್ಪಿದ ಪಾಲಿಕೆ

Picture of Savistara

Savistara

Bureau Report

ಕಳೆದ ಕೆಲವು ವರ್ಷಗಳಿಂದ  ಅವಿಭಜಿತ ಎನ್​ಸಿಪಿ ಪಕ್ಷದ ಹಿಡಿತದಲ್ಲಿದ್ದ ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚುಂಚ್​ವಾಡ ಪುರಸಭೆ ಅವರ ಕೈ ಜಾರಿ ಬಿಜೆಪಿ ತೆಕ್ಕೆಗೆ ಜಾರಿದೆ. 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅವಿಭಜಿತ ಎನ್​ಸಿಪಿ ಗೆಲುವು ಸಾದಿಸಿ ಅಧಿಕಾರಕ್ಕೇರಿತ್ತು. ಐದು ವರ್ಷಗಳ ಅವಧಿ ಮುಗಿಯೋದರೊಳಗೆ ಎನ್​ಸಿಪಿ ಇಬ್ಬಾಗವಾಗಿತ್ತು. 

ಡಿಸಿಎಂ ಅಜಿತ್ ಪವಾರ್ ಅವರು ಎನ್​ಸಿಪಿಯಿಂದ ಆಚೆ ಬಂದ ಬಳಿಕ ನಡೆದ ಚುನಾವಣೆ ಇದಾಗಿದೆ. ಗುರುವಾರ(ಜ. 15) ಮುಂಬೈ ಮಹಾನಗರ ಪಾಲಿಕೆ ಸೇರಿ 28 ನಗರಸಭೆ, ಪುರಸಭೆಗಳಲ್ಲಿ ಮತದಾನ ನಡೆದಿತ್ತು

ಪುಣೆ: ಮಹರಾಷ್ಟ್ರದ ಬೃಹನ್ಮುಂಬೈ ಸೇರಿ 28 ಪುರಸಭೆಗಳ ಚುನಾವಣಾ ಮತ ಎಣಿಕೆ ಮುಂದುವರೆದಿದ್ದು, ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚುಂಚ್​ವಾಡ ಪುರಸಭೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಪಾಲಿಕೆ ಮತ್ತು ಪುರಸಭೆಯಲ್ಲಿ ಬಹುಮತದತ್ತ ಮುನ್ನಡೆ ಸಾಧಿಸಿದೆ.ಚುನಾವಣೆಗೂ ಮುನ್ನ ಒಡೆದು ಹೋಗಿದ್ದ ನ್ಯಾಷ್​ನಲಿಷ್ಟ್ ಕಾಂಗ್ರೆಸ್ ಪಕ್ಷದ(ಎನ್​ಸಿಪಿ) ಬಣಗಳು ಪಾಲಿಕೆಯಲ್ಲಿ ಅಧಿಕಾರವನ್ನು ಹಿಡಿಯಲು ಮತ್ತೆ ಒಂದಾಗಿದ್ದವು. ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ, ಶರದ್ ಪವಾರ್ ನೇತೃತ್ವದ ಎನ್​ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ತಿರುಗುಬಾಣವಾಗಿದೆ.

ಪುಣೆ ಪಾಲಿಕೆಯಲ್ಲಿ 190 ಸ್ಥಾನಗಳ ಪೈಕಿ ಬಿಜೆಪಿಯೊಂದೆ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಜಿತ್ ಪವಾರ್ ಅವರ ಎನ್​ಸಿಪಿ ಕೇವಲ 20 ಸ್ಥಾಗಳಲ್ಲಿ ಮುನ್ನಡೆ ಸಾಧಿಸಿದ್ರೆ ಕಾಂಗ್ರೆಸ್ 8 ಸ್ಥಾನಗಳಲ್ಲಿ, ಶಿವಸೇನಾ ಬಣಗಳು ತಲಾ 2 ಸ್ಥಾನಗಳಲ್ಲಿ ಮುಂದಿವೆ.ಹಾಗೆ ಪಿಂಪ್ರಿ-ಚುಂಚ್​ವಾಡ ಪುರಸಭೆಯಲ್ಲಿ 128 ಸ್ಥಾನಗಳ ಪೈಕಿ ಬಿಜೆಪಿಯೊಂದೆ 81 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಶಿಂಧೆ ಶಿವಸೇನಾ 9, ಅಜಿತ್ ಪವಾರ್ ಅವರ ಎನ್​ಸಿಪಿ 36 ಸ್ಥಾನಗಳಲ್ಲಿ, ಶರದ್ ಪವಾರ್ ಅವರ ಎನ್​ಸಿಪಿ ಕೇವಲ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕಳೆದ ಕೆಲವು ವರ್ಷಗಳಿಂದ ಅವಿಭಜಿತ ಎನ್​ಸಿಪಿ ಪಕ್ಷದ ಹಿಡಿತದಲ್ಲಿದ್ದ ಪುಣೆ ಮಹಾನಗರ ಪಾಲಿಕೆ, ಪಿಂಪ್ರಿ-ಚುಂಚ್​ವಾಡ ಪುರಸಭೆ ಅವರ ಕೈ ಜಾರಿ ಬಿಜೆಪಿ ತೆಕ್ಕೆಗೆ ಜಾರಿದೆ. 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅವಿಭಜಿತ ಎನ್​ಸಿಪಿ ಗೆಲುವು ಸಾದಿಸಿ ಅಧಿಕಾರಕ್ಕೇರಿತ್ತು. ಐದು ವರ್ಷಗಳ ಅವಧಿ ಮುಗಿಯೋದರೊಳಗೆ ಎನ್​ಸಿಪಿ ಇಬ್ಬಾಗವಾಗಿತ್ತು. ಡಿಸಿಎಂ ಅಜಿತ್ ಪವಾರ್ ಅವರು ಎನ್​ಸಿಪಿಯಿಂದ ಆಚೆ ಬಂದ ಬಳಿಕ ನಡೆದ ಚುನಾವಣೆ ಇದಾಗಿದೆ. ಗುರುವಾರ(ಜ. 15) ಮುಂಬೈ ಮಹಾನಗರ ಪಾಲಿಕೆ ಸೇರಿ 28 ನಗರಸಭೆ, ಪುರಸಭೆಗಳಲ್ಲಿ ಮತದಾನ ನಡೆದಿತ್ತು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!