ಉ.ಪ್ರ: ಬಾಂಗ್ಲಾದೇಶದ ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಸರ್ಕಾರದಿಂದ ಪುನರ್ವಸತಿ

Picture of Savistara

Savistara

Bureau Report

ಲಖನೌ: ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ)ಸ್ಥಳಾಂತರಗೊಂಡು ರಾಜ್ಯದ ಮೇರಡ್ ಜಿಲ್ಲೆಯ ಮವಾನಾ ಎಂಬಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ 99 ಹಿಂದೂ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿರ್ಧಾರವನ್ನು ಉತ್ತರ ಪ್ರದೇಶ ಸಚಿವ ಸಂಪುಟ ತೆಗೆದುಕೊಂಡಿದೆ ಎಂದು ಸಚಿವ ಸುರೇಶ್ ಕುಮಾರ್‌ ಖನ್ನಾ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹಣಕಾಸು, ಸಂದೀಯ ಹಾಗೂ ಕುಟುಂಬ ಸಚಿವ ಖನ್ನಾ, ‘ಸದ್ಯ ಅವರು ನಂಗ್ಲಾ ಗೋಸಾಯಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಸಿರು ಪೀಠದ ನಿಯಮದಂತೆ ಅವರಿಗೆ ಪುನರ್ವಸತಿ ಕಲ್ಪಿಸುತ್ತೇವೆ’ ಎಂದು ಹೇಳಿದ್ದಾರೆ.ಪುನರ್ವಸತಿ ಯೋಜನೆಯಡಿ, 50 ಕುಟುಂಬಗಳನ್ನು ಕಾನ್ಸುರ ದೆಹಟ್‌ ಜಿಲ್ಲೆಯ ಭೈನ್‌ಸಾಯ ಜಿಲ್ಲೆಯಲ್ಲಿರುವ ಪುನರ್ವಸತಿ ಇಲಾಖೆಯ 27.51 ಎಕರೆ ಪ್ರದೇಶಲ್ಲಿ ಅವರಿಗೆ ಅವರಿಗೆ ಸೂರು ಕಲ್ಪಿಸಲಿದೆ. ಉಳಿದ 49 ಕುಟುಂಬಗಳಿಗೆ ತಾಜ್‌ಪುರ ತರ್ಸೌಲಿ ಗ್ರಾಮದ 26.01 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಪ್ರತಿ ಕುಟುಂಬಕ್ಕೆ 0.5 ಎಕರೆ ಭೂಮಿಯನ್ನು 30 ವರ್ಷದ ಮಟ್ಟಿಗೆ ಲೀಸ್ ನೀಡಲಾಗುವುದು. ಎರಡು ಬಾರಿ ಲೀಸ್ ನವೀಕರಣ ಮಾಡುವ ಅವಕಾಶ ನೀಡಲಾಗುತ್ತದೆ. 90 ವರ್ಷದ ಬಳಿಕ ನಿಗದಿತ ಪ್ರೀಮಿಯಂ ಅಥವಾ ಗುತ್ತಿಗೆ ಬಾಡಿಗೆಯನ್ನು ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!