ಶಾಂತಿ ಸಂಧಾನ | ಪಾಕ್ ಗೆ ಅರಾಗ್ನಿ ಆಗಮನ: ನೇರ ಮಾತುಕತೆಗೆ ‘ನೋ’ ಎಂದ ಇರಾನ್

Picture of Savistara

Savistara

Bureau Report

ಇರಾನ್ ಮತ್ತು ಅಮೆರಿಕ ನಡುವಿನ ಎರಡನೇ ಹಂತದ ಶಾಂತಿ ಮಾತುಕತೆಗೆ ಸಿದ್ಧತೆ ಜೋರಾಗಿದ್ದು, ಈ ಮಹತ್ವದ ರಾಜತಾಂತ್ರಿಕ ಪ್ರಕ್ರಿಯೆಗಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದೆ. ಈ ಭೇಟಿಯು ಪ್ರದೇಶದ ರಾಜಕೀಯ ವಾತಾವರಣದಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.ಶುಕ್ರವಾರ ರಾತ್ರಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ ಬಂದಿಳಿದ ಅರಾಗ್ನಿಯನ್ನು ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಷಾಕ್ ದಾರ್, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಆಂತರಿಕ ಸಚಿವ ಮೊಕ್ಸಿನ್ ನಖಿ ಸ್ವಾಗತಿಸಿದರು.

ಅಮೆರಿಕದ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್‌ ಮತ್ತು ಜೇರೆಡ್ ಕುಶ್ನರ್ ಶನಿವಾರ ಪಾಕಿಸ್ತಾನ ತಲುಪುವ ನಿರೀಕ್ಷೆಯಿದೆ. ಆದರೆ ಇರಾನ್, ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದನ್ನು ತಾತ್ಕಾಲಿಕವಾಗಿ ನಿರಾಕರಿಸಿದ್ದು, ತನ್ನ ಸಂದೇಶಗಳನ್ನು ಪಾಕಿಸ್ತಾನದ ಮೂಲಕ ರವಾನಿಸುವುದಾಗಿ ತಿಳಿಸಿದೆ.ಈ ಮಾತುಕತೆಯಲ್ಲಿ ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆ ಕಡಿಮೆ ಮಾಡುವುದು ಮತ್ತು ಶಾಶ್ವತ ಕದನ ವಿರಾಮ ಸಾಧಿಸುವುದು ಪ್ರಮುಖ ಅಂಶಗಳಾಗಿವೆ. ಜೊತೆಗೆ ಇರಾನ್ ತನ್ನ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!