ಪುತ್ರನ ಕ್ಷೇಮಕ್ಕಾಗಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಪವನ್ ಕಲ್ಯಾಣ್ ಪತ್ನಿ

Picture of Savistara

Savistara

Bureau Report

ಹೈದರಾಬಾದ್: ಆಂಧ್ರ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ಜೆವಾ ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ.

ಇವರ ಪುತ್ರ ಮಾರ್ಕ್ ಶಂಕರ್ (8) ಏಪ್ರಿಲ್ 8ರಂದು ಸಿಂಗಪುರದಲ್ಲಿ ನಡೆದಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದರು. ಸಿಂಗಪುರಕ್ಕೆ ತೆರಳಿದ್ದ ಪವನ್ ಕಲ್ಯಾಣ್ ನಿನ್ನೆ ಪತ್ನಿ ಅನ್ನಾ ಮತ್ತು ಮಗನನ್ನು ಸುರಕ್ಷಿತವಾಗಿ ವಾಪಸ್ ಹೈದರಾಬಾದ್‌ಗೆ ಕರೆತಂದಿದ್ದಾರೆ. ಇದರ ಬೆನ್ನಲೇ ಪುತ್ರನ ಆರೋಗ್ಯ ಕ್ಷೇಮಕ್ಕಾಗಿ ಅನ್ನಾ ಲೆನ್ನೆವಾ ಮುಡಿ ಸಮರ್ಪಿಸಿದ್ದಾರೆ ಎನ್ನಲಾಗಿದೆ.ತಿರುಪತಿಯಲ್ಲಿ ಮುಡಿ ಅರ್ಪಿಸುತ್ತಿರುವ ಫೋಟೊಗಳನ್ನು ಜನಸೇನಾ ಪಕ್ಷ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಮೋದಿಗೆ ಧನ್ಯವಾದ ಹೇಳಿದ ಪವನ್

ಹೈದರಾಬಾದ್‌ಗೆ ಮಗ ಮಾರ್ಕ್ ಶಂಕರ್‌ನೊಂದಿಗೆ ವಾಪಸ್ ಆದ ಪವನ್ ಕಲ್ಯಾಣ್, ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಕುಟುಂಬದ ಜತೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.

ಇದರ ಜತೆಗೆ ಪುತ್ರನ ಆರೋಗ್ಯ ಹೇಗಿದೆ ಎಂಬುದರ ಬಗ್ಗೆಯೂ ಪವನ್ ಕಲ್ಯಾಣ್ ಮಾಹಿತಿ ಹಂಚಿಕೊಂಡಿದ್ದಾರೆ. ‘ಸಿಂಗಪುರದಲ್ಲಿ ನಡೆದ ಘಟನೆ ದುರದೃಷ್ಟಕರ. ಅವಘಡದಲ್ಲಿ ಗಾಯಗೊಂಡ ಮಗ ಮಾರ್ಕ್‌ ಶಂಕರ್‌ನ ಆರೋಗ್ಯ ಸ್ಥಿರವಾಗಿದೆ. ಅವನೀಗ ಚೇತರಿಸಿಕೊಳ್ಳುತ್ತಿದ್ದಾನೆ. ಶಂಕರ್‌ನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ’ ಎಂದೂ ಅವರು ಹೇಳಿದ್ದಾರೆ.ಸಿಂಗಪುರದ ಕಟ್ಟಡವೊಂದರಲ್ಲಿ ಏಪ್ರಿಲ್ 8ರಂದು ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬಾಲಕಿ ಮೃತಪಟ್ಟು, ಪವನ್ ಕಲ್ಯಾಣ್ ಪುತ್ರ ಸೇರಿದಂತೆ 20 ಮಂದಿ ಗಾಯಗೊಂಡಿದ್ದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!